ಏಕಾಂತ
ಮನಸು ಬಯಸುತಿದೆ ಏಕಾಂತ
ತಿಳಿಯದಾಗಿದೆ ನನಗೂ ಏಕಂತ
ಎಲ್ಲಾದರು ಓಡಿ ಹೋಗಿಬಿಡಬೇಕೆಂಬಂತ ಧಾವಂತ
ಈ ಭಾವ ಒಳಗೆ ಆಗಿಬಿಡುವುದೇನೊ ಅನಂತ
ಎಂದಿಗೂ ಬಿಡಲಾರೆ ನಿನ್ನ ಎಂದಪ್ಪಿದೆ ಈಗೀಗ
ಬೇಡವೆನಿಸುತ್ತದೆ ಈ ಏಕಾಂತ ಆಗಾಗ
ಇದರಿಂದ ಬಿಡುಗಡೆ ಸಿಗುವುದು ಯಾವಾಗ
ಹೇಗೆ ಹೇಳವುದು ಇದರ ಮಡಿಲಲಿದ್ದಾಗ ಆಗುವ ಆವೇಗ
ಈ ಏಕಾಂತದು ಪ್ರತಿ ಬಾರಿ ಬೇರೆ ಬೇರೆ ವೇಷ
ಕೆಲವೊಮ್ಮೆ ಎದೆಯೊಳಗೆ ಎಂಥದೊ ಆವೇಶ
ಸತ್ತು ಪುನರ್ಜನ್ಮ ಪಡೆದಂತನಿಸುವುದು ಒಂದು ನಿಮಿಷ
ಒಮ್ಮೆ ಅದರಲೆ ಖುಷಿಯ ಕಂಡು ಮನಸಾಗುವುದು ಹರುಷ
ನನ್ನೊಳಗೆ ಇದೆಂದೂ ಬಿಟ್ಟು ಬಿಡದ ಮಾಯೆ
ಆಗಾಗ ತೋರಿ ಹೋಗುವುದು ತನ್ನ ಛಾಯೆ
ಮತ್ತೆ ಮತ್ತೆ ಕಾಡಿದಾಗ ಸತ್ತಾಂತಾದರು ನಾ ಸಾಯೆ
ಏಕಾಂತವೆ ನೀನಾದರೂ ಬಂದು ನೀನೆನೆಂದೂ ಹೇಳಲಾರೆಯೆ ?
- ಶ್ರೀಕಾವ್ಯ
25 Sep 2017, 08:47 pm
Download App from Playstore: