ನೆಪಕೆ ಬಲಿಯಾದ ಬದುಕಿನ ಧ್ಯೇಯ!
ಬದುಕಿನ ಬಯಲಲಿ
ಬದುಕುವ ತವಕದಲಿ
ಗುರಿಯ ಹಿಂಬಾಲಿಸುತಲಿ
ಕಟ್ಟಿದೆನು,ಹೀಗೆ ಬಾಳಬೇಕೆಂಬ
ಕನಸೊಂದನು ನಾನಂದು!
ಸವಿಸಿದ ಬಾಳ ಬಟ್ಟೆಯ
ತಿರುವುಗಳದೆಷ್ಟೊ ಅರಿಯೆ
ಕಲ್ಪನೆಗಳಲ್ಲೆ ಕಳೆದೆನೆಷ್ಟೊ ಸಮಯ
ಮೂಕ ದೇವರ ಮುಂದೆ ಕೂತು ಮಾಡಿದೆ
ಅರ್ಥವಿಲ್ಲದ ವ್ಯರ್ಥವಚನಗಳ ನಾನಂದು!
ಬಯಸಿದಂತೆ ನಡೆಯುವುದೆಲ್ಲ
ಜಗವ ಬದಲಿಸುವ ಯುಕ್ತಿ ನನಗಿದೆಯಲ್ಲ
ಜಂಬದಿ ಭವಿಷ್ಯವ ಕಲ್ಪಿಸಿಕೊಂಡೆನಲ್ಲ
ಸಮಯ ಜಾರಿದಂತೆಲ್ಲ,ಕಲ್ಪನೆಗಳು ಜಾರಿ ನೆಪಹೊಡ್ಡಿ ಗುರಿಯಿಂದ ಜಾರುತಿಹೆನಿಂದು!
ಸಮಾಜ ಬದಲಿಸುವ ಛಲ ಅಂದು
ನವಸಮಾಜದ ಹರಿಕಾರಳ ಕನಸೊಂದು
ಚಿಗುರಿ-ಒತ್ತಡಗಳಿಗೆ ಮಣಿದು ನಶಿಸಿತಿಂದು
ಹೀಗೆ ಸಾಗಬೇಕೆಂಬ ನಿಯಮಗಳ ಮುರಿದು
ಹೇಗೋ ಬಾಳಿದರೆ ಸಾಕೆಂಬ ಸಂಕಲ್ಪ
ತೊಟ್ಟು ಸಾಗುತಿಹೆನಿಂದು!
ಶಾರಧ
- ಶಕುಂತಲಾ
26 Sep 2017, 02:33 am
Download App from Playstore: