ಕರಿ ನೆರಳು......
ಚಿಗುರುವ ಪೈರಿಗೆ........
ಬರಬಿಸಿಲು ಬಡಿದಿರಲು
ಮಳೆಯೇ ಕರಿ ನೆರಳಾಗಿ ಕಾಡಿದೆಯ
ಬೆಳೆವ ಪೈರಿಗೆ .........
ನಮ್ಮ ಪ್ರಾಚೀನ ಸಂಸ್ಕೃತಿಯು
ಅವನತಿಯೆಡೆಗೆ ತಲುಪಿರಲು
ಆಧುನಿಕತೆಯ ಕರಿನೆರಳೆ ತಳ್ಳಿದೆಯ
ಸಂಸ್ಕೃತಿಯ ಅವನತಿಗೆ.......
ಅಗಾಧ ಅರಣ್ಯ ಸಂಪತ್ತು.......
ಕ್ಷೀಣಿಸುತ್ತಿರಲು ಮಾನವನ
ಆಸೆ ದೂರಸೆಗಳ ಕರಿನೆರಳೆ ಕಾರಣವಾಗಿದೆಯ
ಅರಣ್ಯ ಸಂಪತ್ತಿನ ನಾಶಕ್ಕೆ...........
ಅನ್ನದಾತನ ಸಾವು...........
ನೋವುಗಳಿಗೆ ಪ್ರಕೃತಿಯ ವಿಕೋಪವೋ
ದುರುಳರ ಕಪಟಳವೇ ಕರಿನೆರಳಾಗಿ ಬಾದಿಸಿದೆಯ
ಅನ್ನ ನೀಡುವ ದೇವರಿಗೆ. .....
ವೈದರಿಗೆ ಸವಾಲೊಡ್ಡುವ.....
ಕಾಯಿಲೆಗಳು ಹುಟ್ಟಿಕೊಂಡಿರಲು
ಮನುಶ್ಯನ ಚಟಗಳ ಕರಿನೆರಳೆ ಕಂಟಕವಾಗಿದೆಯ
ವೈದ್ಯರ ಲೋಕಕ್ಕೆ..........
ನಮ್ಮ ಹೆಮ್ಮೆಯ ಕನ್ನಡಕ್ಕೆ.......
ಕನ್ನಡಿಗರಿಗೆ ಸಂತುಷ್ಟ ನ್ಯಾಯ ದೊರಕದಿರಲು
ಪರಭಾಷಿಗರ ಅನ್ಯಭಾಷೆಗಳ ದಬ್ಬಾಳಿಕೆಯ
ಕರಿನೆರಳೇ ಕ್ಯಾನ್ಸರ್ ನಂತಾಗಿದೆಯ...
ನಮ್ಮ ನೆಲದಲ್ಲಿ ನಮ್ಮವರಿಗೆ..............
:-------- ಮಂಜು
- ಮಂಜು
26 Sep 2017, 09:14 am
Download App from Playstore: