*ನೆನಪುಗಳ ಜೊತೆಯಲ್ಲಿ*

ಮೌನ ತುಂಬಿದ ಕಂಗಳಿಂದ
ಕಾದಿರುವೆ ನಲ್ಲ ನಿನಗಾಗಿ...
ನಿನ್ನೊಲವಿನ ನುಡಿಗಾಗಿ
ಹೃದಯ ಬಯಸಿದೆ ಮಗುವಾಗಿ...
ನೆನಪಿನ ಪುಟಗಳ ನಡುವೆ
ಅವಿತು ಕುಳಿತಿರುವೆಯಲ್ಲ..
ನೆನಪುಗಳ ನೆನಪಿನ ಜೊತೆಯಲ್ಲಿ
ದಿನ ಕಳೆದಿರುವೆನು ನಾನಿಲ್ಲಿ..
ನೆನಪಾದರೆ ಬಂದುಬಿಡು ಒಮ್ಮೆ...
ನಿನ್ನ ನೆನಪಿನ ಕ್ಷಣಗಳನ್ನು
ಜೋಪಾನಮಾಡಿ
ಬಚ್ಚಿಟ್ಟಿರುವೆನು...
ನಿನ್ನ ನೆನಪಿನಂಗಳದಿಂದ
ನನ್ನ ನೆನಪುಗಳು
ಮರೆಯಾಗುವ ಮುನ್ನ
ಸೇರಬಾರದೇ ನನ್ನ...

ಪ್ರಿಯಾಂಕ✍

- ಪ್ರಿಯಾಂಕ

26 Sep 2017, 02:53 pm
Download App from Playstore: