ಸಿಂಗಾರದ ಗೊಂಬೆ

ಸಿಂಗಾರಕೆ ಬಂಗಾರದ ಹೊಳಪುತಂದ ವನಿತೆಯವಳು ನನ್ನ ಪೊಗರಿನ ಹಂಗು
ಮುರಿದು ನಾಚಿಕೆಯ ಪಾಠ ಕಲಿಸಿದ ಮನೋಹರಿಯವಳು..........

ಅವಳ ಅಂದ ಬಣ್ಣಿಸಲು ನಿಂತ ಧೀಮಂತ ಲೇಖನಿ ತಿಳಿಯದೇನೆ ಮನಸೋತು ಕುಳಿತಿತ್ತು ಅವಳ ಒಂದು ನೋಟಕ್ಕೆ ಕರಗಿ ನನ್ನೆದೆಯ ನೆನಪಿನ ಗ್ರಂಥದಲ್ಲಿ............

ಯಾವ ಕುಂಚದಿ ನಿನ್ನ ಬಿಡಿಸಿದರು ನಾಚುತಿವೆ ಬಣ್ಣಗಳು ನಿನ್ನ ರೂಪವು ನಾವಾಗಲಾರೆವು ಎಂದು..............

ಗುಂಗುರಾದ ನಿನ್ನ ಮುಂಗುರುಳು ಮುದ್ದಿಸುತ್ತಿವೆ ಪ್ರತಿಕ್ಷಣ ಕೆನ್ನೆಗೆ ತಾವಿರುವವರೆಗೂ ಈ ಅದೃಷ್ಟ ಇತರರಿಗೆ ಸಿಗಬಾರದೆಂದು ಚೆಲುವೆ..............

ಆ ಕೋಮಲ ತುಟಿಯಮೇಲಿನ ಕಿರು ಮಚ್ಚೆ ನಿನ್ನ ಸೊಗಸಿಗೆ ದೃಷ್ಟಿತಗೆದು ದೇವರಿಟ್ಟ ನನ್ನ ಕಣ್ಣಿನ ನಗೆಯ ಚಿಹ್ನೆ ನಿನ್ನ ಕಂಡಕ್ಷಣ ನನ್ನಲ್ಲಿ..........

ಕಿನ್ನರಿ ನಿನ್ನ ಕಿರುಗಾಲಿನ ಗೆಜ್ಜೆ ಸದ್ದು ನನ್ನೆದೆಯ ಅಡಿಯಲ್ಲಿ ಉಸಿರಂತೆ ಬಚ್ಚಿಡುವೆ ಬೆಚ್ಚಗೆ ಬಚ್ಚಿಡಲೆಂದು.............

ಕೊಂಚ ನೀ ಉಟ್ಟ ಸೀರೆಯ ಸೆರಗಾಗುವ ಅವಕಾಶ ನೀಡುವೆಯಾ ನಿನ್ನಲ್ಲಿನ ಸುಗುಣಗಳ ಸಾಲವಾದರು ಪಡೆದುಕೊಳ್ಳುವೆ ನನ್ನ ಕವನದ ಪದಗಳಿಗೆ ನಿನ್ನ ಅದ್ವಿತೀಯ ರೂಪ ತುಂಬಲು...........

ಯಾವ ಸೊಗಸೀನ ಸೂಜಿಗಾತಿ ನೀನು ನನ್ನಲ್ಲಿ ಅಡಗಿರುವೆ ಮಧುರ ಸುವಾಸನೆಯಂತೆ.........

- ಚುಕ್ಕಿ

27 Sep 2017, 06:32 pm
Download App from Playstore: