ಬೇಡವೆನಗೆ ಈ ನಿಖಾಬು-ಬುರಕಾ

ಬೇಡವೆನಗೆ ಈ ನಿಖಾಬು-ಬುರಕಾ

ಬೇಡವೆನಗೆ ಈ ನಿಖಾಬು-ಬುರಕಾ, ನಾನು ವಿದ್ಯಾವಂತಳಾಗುವ ತನಕ;
ಬೇಡವೆನಗೆ ಈ ನಿಖಾಬು-ಬುರಕಾ, ನಾನು ಸ್ವಾವಲಂಬಿಯಾಗುವ ತನಕ;
ಬೇಡವೆನಗೆ ಈ ನಿಖಾಬು-ಬುರಕಾ,
ನನ್ನ ಸಂಗೀತ ಸುಧೆಯನ್ನು  ನೀ ಸಾರ್ವಜನಿಕವಾಗಿ ಆಸ್ವಾದಿಸುವ ತನಕ; ಬೇಡವೆನಗೆ ಈ ನಿಖಾಬು-ಬುರಕಾ, ನನ್ನ ಭವಿಷ್ಯವನ್ನು ನಾನೇ ಬರೆದುಕೊಳ್ಳಲು ಶಕ್ತಳಾಗುವ ತನಕ;
ಬೇಡವೆನಗೆ ಈ ನಿಖಾಬು-ಬುರಕಾ,
ನನ್ನ ಪ್ರತಿಭೆಯನ್ನು ನೀ ಗೌರವಿಸುವ ತನಕ; ಬೇಡವೆನಗೆ ಈ ನಿಖಾಬು-ಬುರಕಾ,
ನನ್ನ ಏಳಿಗೆಯನ್ನು ನೀವು ಸಹಿಸಿಕೊಳ್ಳುವ ತನಕ; ಬೇಡವೆನಗೆ ಈ ನಿಖಾಬು-ಬುರಕಾ,
ನನ್ನ ಚಿಕ್ಕ ಪುಟ್ಟ ಬೇಡಿಕೆಗಳಿಗೂ ಪಾಲಕರೆದುರು ಅಂಗಲಾಚುವ ಕೂಸಾಗಿರುವ ತನಕ;
ಬೇಡವೆನಗೆ ಈ ನಿಖಾಬು-ಬುರಕಾ,
ಒಡಹುಟ್ಟಿದ ಸಹೋದರರಿಗಿಂತ ನನ್ನನ್ನು ಕೀಳಾಗಿಕಾಣುವ ತಂದೆ ತಾಯಿಯರ ಮನಃ ಪರಿವರ್ತನೆಯಾಗುವ ತನಕ;
ಬೇಡವೆನಗೆ ಈ ನಿಖಾಬು-ಬುರಕಾ, ಪುರುಷಪ್ರಧಾನ ಸಮಾಜದ ದಬ್ಬಾಳಿಕೆಯಿಂದ ನಾನು ಹೊರಬರುವ ತನಕ;
ಬೇಡವೆನಗೆ ಈ ನಿಖಾಬು-ಬುರಕಾ, ಸಾಮೂಹಿಕ ಪ್ರಾರ್ಥನೆಗಳಿಗೆ ನನ್ನನ್ನು ನಿಷೇದಿಸುವ ಮುಲ್ಲಾಗಳಿರುವ  ತನಕ;
ಬೇಡವೆನಗೆ ಈ ನಿಖಾಬು-ಬುರಕಾ, ಬಾಲ್ಯ ವಿವಾಹ ಮಾಡುವ ಮತ್ತು ಮುದುಕರಿಗೆ ಕಟ್ಟಿ ಸಾಗಹಾಕುವ ಅಪ್ಪಂದಿರಿರುವ ತನಕ;
ಬೇಡವೆನಗೆ ಈ ನಿಖಾಬು-ಬುರಕಾ, ಸ್ತ್ರೀ ಭ್ರೂಣ ಹತ್ಯೆಗೆ ಒಪ್ಪಿಗೆಕೊಡುವ ಸ್ತ್ರೀ ನನ್ನಮ್ಮನಾಗಿರುವ ತನಕ;
ಬೇಡವೆನಗೆ ಈ ನಿಖಾಬು-ಬುರಕಾ, ಪರಪುರುಷರೊಂದಿಗೆ ಸಲಿಗೆಯಿಂದಿರುವ ಹೆಂಗಸರೆಲ್ಲರನ್ನೂ ವೇಷ್ಯೆಯೆಂದು ಅನುಮಾನಿಸುವ ತಮ್ಮಂದಿರಿರುವ ತನಕ; ಬೇಡವೆನಗೆ ಈ ನಿಖಾಬು-ಬುರಕಾ,
ಕಂಡ ಕಂಡ ಹೆಂಗಸರನ್ನು ಕದ್ದು ನೋಡುತ್ತಾ ನನ್ನನ್ನು ಪರದೆಯಲ್ಲಿರಿಸುವ ಅಣ್ಣಂದಿರಿರುವ ತನಕ;
ಬೇಡವೆನಗೆ ಈ ನಿಖಾಬು-ಬುರಕಾ, ಬಹು ಪತ್ನಿತ್ವದ ಕಾನೂನು ಬಂದ್ ಆಗುವ ತನಕ; ಬೇಡವೆನಗೆ ಈ ನಿಖಾಬು-ಬುರಕಾ, ತ್ರಿವಳಿ ತಲಾಖ್ ಪದ್ಧತಿ ನಿಷೇದಿಸುವ ತನಕ;
ಬೇಡವೆನಗೆ ಈ ನಿಖಾಬು-ಬುರಕಾ, ಧರ್ಮದ ಹೆಸರಿನಲ್ಲಿ ಭಯೋತ್ಪಾದನೆಯನ್ನು ಹುಟ್ಟುಹಾಕುವ ಧರ್ಮಾಂಧರಿರುವ ತನಕ; ಬೇಡವೆನಗೆ ಈ ನಿಖಾಬು-ಬುರಕಾ,
ನನ್ನ ಕಲೆಯನ್ನು ಪೋಷಿಸಿ, ಹುರಿದುಂಬಿಸಿ  ನನ್ನನ್ನು ಪ್ರೋತ್ಸಾಹಿಸುವ ಸಂಗಾತಿ ಸಿಗುವ ತನಕ.

ಡಾ!ಸಿ.ಮುರಳೀಧರ ಮಾರ್ಚ್, 2017 ಏರ್ಕಾಡ್

- ಡಾ!ಸಿ.ಮುರಳೀಧರ

27 Sep 2017, 10:18 pm
Download App from Playstore: