ಗುಲಾಬಿ ಕನ್ಯೆ

ಗುಲಾಬಿ ಕನ್ಯೆ

ಹೆಣ್ಣು ಗಂಡೆಂಬ ತಾರತಮ್ಯವಿಲ್ಲದೆ ಕುತೂಹಲದಿಂದ ಕಾತರಿಸಿ ಕಾಯುತ್ತಿರುವ ಬಡವ ಬಲ್ಲಿದ ಬಾಲ ಬಲಾಡ್ಯ ವಯೋವೃದ್ದರೆಲ್ಲರದು ವೇದಿಕೆಯೆಡೆಗೇ ಗಮನ!


ಗುಲಾಬಿ ನೇರಳೆಯ ನಿರಿಗೆಯುಟ್ಟ  ನವತರುಣಿ ಮಂದಗಮನೆಯಾಗಿ  ಎರಡು ಸಾವಿರದ ಕಿರೀಟವ ತೊಟ್ಟು ನಗದಿನ ಲೋಕಕೆ ಆಗಮನ!


ಅಲ್ಲೋಲಕಲ್ಲೋಲ ಗೊಂಡ ಸಮಾಜದ ಮೂಕಪ್ರೇಕ್ಷಕರ ಮುಂದೆ 'ನಗದುರಹಿತ ವಹಿವಾಟಿ'ನ ಸಂದೇಶದೊಂದಿಗೆ ಆಕೆಯ ನರ್ತನ !


ರಾಜಕಾರಣಿ ಕಾಳಧನಿಕರ ಕನಸಿನ ಕನ್ಯೆಯಾಗಿದ್ದ  ಐನೂರು, ಸಾವಿರ  ಕಿರೀಟದಾರಿಗಳು ಗುಲಾಬಿಯ ರಂಗಪ್ರವೇಶದಿಂದ ಕಂಗೆಟ್ಟು ಏಕಾಏಕಿ ನೇಪಥ್ಯಕ್ಕೆ ನಿರ್ಗಮನ!


ಲಲ್ಲೂ, ದೀಧಿ, ಕೇಜ್ರಿ, ಮಾಯಾ, ಎಡಚ, ಕಾಂಗಿ, ಮುಲಾಯಮೆಲ್ಲರೂ ಮೌನ ಈ ದೇವದಾಸಿಯರೊಂದಿಗೆ ತಳಕುಹಾಕಿಕೊಂಡಿದ್ದವರೆಲ್ಲರಿಗೂ ಈಗ ಉಳಿದಿರುವುದೊಂದೇ ದಾರಿ- ಸಹಗಮನ!!


ಡಾ!ಸಿ. ಮುರಳೀಧರ

ನವೆಂಬರ, 2016

- ಡಾ!ಸಿ.ಮುರಳೀಧರ

27 Sep 2017, 10:19 pm
Download App from Playstore: