ಮತ್ತೊಮ್ಮೆ ನಿನ್ನನ್ನು ಪ್ರೀತಿಸುವ ಆಸೆ
ಮುಂಜಾನೆ ಎದ್ದೊಡನೆ ಗಡಿಬಿಡಿಯಲಿ ತಯಾರಾಗಿ, ಸಬ್ಯನಂತೆ ಸೋಗುಹಾಕಿ ನಿನ್ನಾಗಮನದ ನಿರೀಕ್ಷೆಯ ಆ ಸುಖವನ್ನನುಭವಿಸಲು ...
ಮತ್ತೊಮ್ಮೆ ನಿನ್ನನ್ನು ಪ್ರೀತಿಸುವ ಆಸೆ ! 1 !
ಅಕ್ಕಪಕ್ಕದವರ ಕಣ್ಣುತಪ್ಪಿಸಲು ಹಲವಾರು ಕುಂಟುನೆಪಗಳನೊಡ್ಡಿ, ನಿನ್ನ ದಂತದ ಮೈಯ ಸೌಂದರ್ಯವನ್ನು ಕಾಫಿಯೊಂದಿಗೆ ಹೀರಲು .......
ಮತ್ತೊಮ್ಮೆ ನಿನ್ನನ್ನು ಪ್ರೀತಿಸುವ ಆಸೆ ! 2 !
ಸಾಂಗತ್ಯದ ಭಾವದಲಿ ಸ್ಪರ್ಷಸುಖದ ಮತ್ತಿನಲಿ, ಮಬ್ಬುಗತ್ತಲಿನ ಸಂಜೆಯಲಿ ಗೊತ್ತು ಗುರಿಯಿಲ್ಲದ ದಾರಿಯನು ಸವೆಸಲು ...
ಮತ್ತೊಮ್ಮೆ ನಿನ್ನನ್ನು ಪ್ರೀತಿಸುವ ಆಸೆ ! 3 !
ಕೈಯಲ್ಲಿ ಕೈ ಹಿಡಿದು, ನವಿರಾಗಿ ಕಟಿ ಬಳಸಿ, ತುಟಿಗಳೊಂದಿಗೆ ತುಂಟಾಟವನಾಡುತ್ತ ಮನದಾಸೆಯನ್ನರುಹಲು ...
ಮತ್ತೊಮ್ಮೆ ನಿನ್ನನ್ನು ಪ್ರೀತಿಸುವ ಆಸೆ ! 4 !
ಮಡಿಲಲ್ಲಿ ಮಗುವಾಗಿ ಮುಂಗುರುಳಿನೊಂದಿಗೆ ಆಟವಾಡುತ್ತಾ, ಬಿಸಿಯುಸಿರಿನ ಕಚಗುಳಿಯನ್ನಿಡುತ್ತಾ ಹೃದಯವದು ಬಿನ್ನವಿಸಿಕೊಳ್ಳಲು ...
ಮತ್ತೊಮ್ಮೆ ನಿನ್ನನ್ನು ಪ್ರೀತಿಸುವ ಆಸೆ ! 5 !
ಡಾ! ಸಿ. ಮುರಳೀಧರ ಏಪ್ರಿಲ್ 10, 2017
- ಡಾ!ಸಿ.ಮುರಳೀಧರ
27 Sep 2017, 10:46 pm
Download App from Playstore: