ಕೇಳು ಗೆಳತಿ

ನೆನ್ನೆ ಬಂದಿದ್ದೆ
ನೀ ಮಲಗಿದ್ದೆ
ಇಂದು ಬಂದಿರುವೆ
ಹೊಸ ಹಾಡೊಂದ ಕೇಳು
ಸಾಮಾನ್ಯ ಗೆಳತಿ ಜೀವನದಲ್ಲಿ
ಏಳು ಬಿಳು,

ನೋಡಿರುವೆ ಗೆಳತಿ
ಆಗುವುದ ಮನೆಗಳು ಹೋಳು
ಕೇಳಿರುವೆ ಗೆಳತಿ ನೊಂದವರ ಅಳು
ಜನರು ಆಗಿರುವರು ನೋಡು ವ್ಯವಸ್ಥೆಯ ಆಳು
ನಿನಗರಿವುಂಟೆನು ಹೇಗಿರುವುದೆಂದು
ಶೋಷಿತರ ಬಾಳು?

ಕಟ್ಟೋನವೇನು ನಾವಿಬ್ಬರು ಸೇರಿ ಹೊಸದೊಂದು ಹಾಡು
ಕಟ್ಟೋನವೇನು ನಾವಿಬ್ಬರು ಸೇರಿ ಹೊಸದೊಂದು ನಾಡು
ಇಬ್ಬರು ಸೇರಿ ನೆಡೋಣವೇನು ಮೊಳೆತ ಪ್ರೀತಿಯ ಕಾಳು
ಗಿಡವಾಗಿ ಮರವಾಗಿ ಹಣ್ಣು ಬಿಡುವವರೆಗು ಕಾವೋನವೇ?
ಇಬ್ಬರು ಸೇರಿ ಹೊಸ ಬಾಳೊಂದ ಕಟ್ಟೋನವೇ?
ಏನ ಮಾಡುವ ಹೇಳು ಗೆಳತಿ
ಆಗುವೆಯ ನನ್ನ ಹೃದಯದ ಒಡತಿ?

~ ಹರ್ಷ ಹೆಚ್ ಎಲ್

- HarshaHL

28 Sep 2017, 10:27 am
Download App from Playstore: