ನನ್ನ ಅಜ್ಜಿ...

ಹೋಗಿಲ್ಲ ಶಾಲೆಗೆ ಓದಿಲ್ಲ ಒಂದಕ್ಷರ
ಆದರೂ ನೀ ಬಲು ಜಾಣೆ ಮೊಮ್ಮಕ್ಕಳ ಹಸಿವನ್ನ
ಮುಖದ ಚಿಹ್ನೆಯಿಂದ ನೀ ಅರಿಯುತ್ತಿದ್ದೆ

ಕಾಯುತ್ತಿದ್ದೆ ಆಡಲು ಹೋಗಿರುವ ಮೊಮ್ಮಕ್ಕಳ ದಾರಿಯ, ತಡವಾದರೆ ಹಲಬುತ್ತಿದ್ದೆ ಮೊಮ್ಮಕ್ಕಳ ಮುದ್ದು ಮುಖವ ನೀ ನೋಡಲು..

ಕಥೆಯ ಹೇಳುತ್ತಿದ್ದೆ ಒಗಟ ಬಿಡಿಸುತ್ತಿದ್ದೆ
ನಿನ್ನ ಮಡಿಲೊಳಗೆ ಮಲಗಿಸಿ ತಪ್ಪಡಿಸಿ
ಮಲಗಿಸುತ್ತಿದ್ದೆ, ಮೈಮರೆತು ಮಲಗುವ ನಮಗೆ
ನಿನ್ನ ಮಡಿಲೆ ಸ್ವರ್ಗದಂತೆ

ಹಠಮಾಡಿದಾಗ ರಮಿಸುತ್ತಿದ್ದೆ ತಲೆಯ ಮೇಲೆ ಕೈ
ಸವರಿ ಮುಗ್ದ ಮನಸ್ಸಿಗೆ ಮುತ್ತಿನ ಮಾತುಗಳ ಹೇಳುತ್ತಿದ್ದೆ, ಕ್ಷಣ ದೂರವಿರಲು ಚಿತ್ತವೆಲ್ಲವೂ ಮೊಮ್ಮಕ್ಕಳ ಚಿಂತೆಯಲ್ಲಿ ನೀ ಕಳೆಯುತ್ತಿದ್ದೆ.

ಹಣ್ಣಾಗಿ ಹೊನ್ನಾಗಿ ನೀ ಜೀವ ಸವೆದರೂ
ತುಸು ಕಡಿಮೆ ಇರಲಿಲ್ಲ ನಿನ್ನ ಮೊಮ್ಮಕ್ಕಳ ಪ್ರೀತಿಗೆ,
ಬಯಸಲಿಲ್ಲ ನೀನು ಒಂದಿನವೂ ಒಡವೆ ವಸ್ತ್ರಗಳ
ಕಣ್ಣು ಮಂಜಾಗಿ ಕತ್ತಲು ಕವಿದ ಮನೆಗೆ ನೀ ಹೊರಟೆ ನಮ್ಮೆಲ್ಲರ ನೀ ಅಗಲಿ...

- Irayya Mathad

28 Sep 2017, 01:52 pm
Download App from Playstore: