ಪ್ರೀತಿಯೆಂದರೇನೆ ಮನಸೇ
ಪ್ರೀತಿಯೆಂದರೇನೆ ಮನಸೇ ಉತ್ತರ
ಸಿಗದ ನೂರು ಪ್ರಶ್ನೆಗಳ ಅಗೋಚರ ಭಾವನೇನಾ..............
ಕೊಡುವುದೊಂದೆ ಕಲಿತ ನಿಸ್ವಾರ್ಥ ಪ್ರೀತಿ ಬೇಡುವುದನ್ನೇ ಏತಕೆ ಕಲಿತಿಲ್ಲ ಇದುವರೆಗೂ ಇಳೆಯಲ್ಲಿ.............
ಇಷ್ಟ ನಿನ್ನಲ್ಲಿ ಕಷ್ಟ ನಿನ್ನಲ್ಲಿ ಕನಸು ನಿನ್ನಲ್ಲಿ
ನನಸು ನಿನ್ನಲ್ಲೇ ಅಳುವೊಮ್ಮೆ ನಗುವೊಮ್ಮೆ ಕೋಪವೊಮ್ಮೆ ಮೋಹವೊಮ್ಮೆ............
ಬೆರೆತೊಗುವೆ ಉಸಿರಲ್ಲಿ ಕರಗೋಗುವೆ ಕಣ್ಣಲ್ಲಿ ಕೊನೆಯಾಗುವೆ ಬೇಡವಾದ ಮಾತುಗಳ ಮುಳ್ಳಿನ ಹಾದಿಯಲ್ಲಿ ನೆನಪುಗಳೆಂಬ ಸಿಹಿಯಾದ ಹೂಗಳನ್ನು ಮನಸಲ್ಲಿ ಚೆಲ್ಲಿ...............
- ಚುಕ್ಕಿ
01 Oct 2017, 09:51 pm
Download App from Playstore: