ಕಂಬನಿ

ಕಾಣದ ನೋವು ಕೈ ಬಿಡದೆ ನನ್ನ ಕಾಡುತ್ತಿದೆ
ಕಣ್ಣೀರ ಸುರಿಸೆಂದು ಪ್ರತಿಕ್ಷಣ.........

ಸದ್ದಿಲ್ಲದೆ ಕಣ್ಣೀರ ಹನಿಯು ಎದೆಯ ಮೀಟಿ
ಕೊರೆದು ತಗೆಯುತ್ತಿದೆ ಬೇಸರದ ಭಾವನೆಗಳನ್ನು ಮತ್ತೆ ಕಣ್ಣ ಬದಿಗೆ ಕಂಬನಿಯಾಗಲೆಂದು..........

ಇಬ್ಬನಿಯ ಮುಸುಕಲ್ಲೂ ಮರೆಯಾಗದ ಮನದ ನೋವು ಕಾಣಿಸಿಕೊಳ್ಳುತ್ತದೆ ಕನಸಲ್ಲೂ ಬೆಂಬಿಡದೇ ಹೊಸದಾದ ಅರೆ ಮುಗಿದ ಕಣ್ಣೀರ ಕಥೆಯ ಆದಿಯಂತೆ..................

- ಚುಕ್ಕಿ

02 Oct 2017, 11:29 pm
Download App from Playstore: