ಪ್ರಿಯತಮೆ

ಅವಳು ಮರೆಯಾಗೆ ಅಮವಾಸ್ಯೆಯ ಸಹವಾಸ
ಅವಳ ಕಣ್ಬೆಳಕಿನ ಪ್ರೇಮವಿರದೆ ಎದೆಗೆ ಉಪವಾಸ
ಅವಳ‌ ಮುನಿಸೆ ‌ಕರಾಳತೆಯ ಕಡಲು
ಅವಳ ನಗುವೆ ತುಂಬಿಸುವುದು ‌ನನ್ನೊಡಲು
ಅವಳದು ತಲ್ಲಣ ‌ತರುವ ಮೌನ‌
ಅವಳ‌ ಮಾತು ಹಕ್ಕಿಯ‌‌‌ ಇಂಪಿನ ಗಾನ
ಅವಳೆದುರಿದ್ದರೆ ಬೆಳದಿಂಗಳ ಹುಣ್ಣಿಮೆ
ಅವಳೇ ಹೃದಯದರಸಿ ನನ್ನ ಪ್ರಿಯತಮೆ

- ಶ್ರೀಕಾವ್ಯ

03 Oct 2017, 12:06 pm
Download App from Playstore: