ನಿನ್ನ ನೆನಪು .......
ನಿನ್ನ ನೆನಪು
ಬಿಡದೇ ಅಪ್ಪಳಿಸೋ
ಕಡಲ ಅಲೆಗಳ ಹಾಗೆ
ತೀರದ ತೀರದ ಮೋಹ ......
ನಿನ್ನ ನೆನಪು
ಬಿಡದೇ ಕಾಡೋ
ದುಂಬಿಯ ಝೇಂಕಾರದ ಹಾಗೆ ......
ನಿನ್ನ ನೆನಪು
ತುಂಟ ತಂಗಾಳಿಯ ಹಾಗೆ
ಮುಂಗುರುಳ ಬೆಂಬಿಡದು.....
ನಿನ್ನ ನೆನಪು
ಬಿಡಿಸಲಾರದ ಒಗಟು
ಗುರಿಯಿರದ ಪಯಣ
ಉತ್ತರವಿರದ ಪ್ರಶ್ನೆ
ಮದ್ದಿಲ್ಲದ ವ್ಯಸನ ..........
ನಿನ್ನ ನೆನಪು..........
- Shilpa
03 Oct 2017, 07:32 pm
Download App from Playstore: