ದಸರಾ ಉತ್ಸವ

ಹೊನ್ನಿನ ಮಂಟಪದ ಸುಕುಮಾರಿ
ವೈಭವದ ಅಲಂಕಾರದಾರಿಣಿ ಈ ನಾರಿ
ಗಜಪಡೆಯ ಒಡೆಯ ಅರ್ಜುನನ ಬೆನ್ನೇರಿ
ಸಾಂಸ್ಕೃತಿಕ ನಗರಿಯ ಬೆಳಗುವ ಸಂಚಾರಿ!

ಶತ- ಶತಮಾನದ ಒಡತಿ ನೀನು
ರಾಜಾಧಿರಾಜರುಗಳ ಆಶ್ರಯದಾತೆ ನೀನು
ಮಹಿಷಾಸುರನ ವಧಿಸಿದ ದುರ್ಗಾಂಬೆ ನೀನು
ಮೈಸೂರಲ್ಲಿ ನೆಲೆಸಿದ ಚಾಮುಂಡಾಂಬೆ ನೀನು!

ನಾನೂರು ಸಂವತ್ಸರದಿಂದ
ಬೆಳಗುತಿಹ ಸೌಭಾಗ್ಯವತಿ ನೀನು
ಇತಿಹಾಸ ಪುಟ- ಪುಟದಿಂದ
ಮೈಸೂರ ಮಹಿಮೆಯ ಜಗಕೆ
ತೋರುತಿಹ ಮಹಾಲಕ್ಷ್ಮಿ ನೀನು!

ನವ ರೂಪಧಾರಿಣಿ ನೀನು
ನವ ರಾತ್ರಿಯ ಒಡತಿ ನೀನು
ತೋರುವೆ ನವಶಕ್ತಿ ವೈಭವವನ್ನು
ನೀಡು ನಮಗೆ ಸಕಲ ಸೌಭಾಗ್ಯವನ್ನು!



ಶಾರಧ

- ಶಕುಂತಲಾ

03 Oct 2017, 09:27 pm
Download App from Playstore: