ಕೊಂಚ ಮಿಂಚು ಕಣ್ಣಲ್ಲಿ
ಕೊಂಚ ಮಿಂಚು ಕಣ್ಣಲ್ಲಿ
ಕಣ್ಣೀರು ಮರೆಯಾದ
ಅವಶೇಷ ಉಳಿದಲ್ಲಿ.
ಕೊಂಚ ಮಿಂಚು ಕಣ್ಣಲ್ಲಿ
ಮುಗುಳು ನಗೆಯ ಮಾತೊಂದು
ಕಣ್ಣಲ್ಲಿ ಕಂಡಲ್ಲಿ.
ಕೊಂಚ ಮಿಂಚು ಕಣ್ಣಲ್ಲಿ
ನಾಳಿನ ದಿನದ ನಗೆಯ ಭರವಸೆ
ನಿನ್ನ ಮಾತುಗಳ ಚಕಮಕಿಯ ನಡುವಲ್ಲಿ.
- ಚುಕ್ಕಿ
04 Oct 2017, 12:01 am
Download App from Playstore: