ನೆನಪಿನ ಸುತ್ತ
ಬಾಲ್ಯದ ನೆನಪುಗಳು
ಮತ್ತೆ ಮತ್ತೆ ಕಾಡುತ್ತಿವೆ
ನಾನಂದು ಮಾಡಿದ ತಪ್ಪುಗಳು
ಇಂದಿಗೂ ನಗು ತರಿಸುತ್ತವೆ!
ಆ ದಿನದಲ್ಲಿದ್ದ ಮುಗ್ದತೆ
ಮಾಯವಾಗುತ್ತಿದೆ ಯಾಕಿಂದು
ಅಂದು ಕಂಡ ಕನಸುಗಳು
ಚಿಕ್ಕದಾಗಿ ಕಾಣುತ್ತಿವೆ ನನಗಿಂದು!
ಜೊತೆಗಿರದೆ ದೂರದಲ್ಲಿದ್ದರೂ
ನೆನಪಿಸುವ ಸಿಹಿ ನೆನಪುಗಳು.
ಮರೆತಂತೆ ನಟಿಸಿದರೂ
ಮರೆಯಾಗದು ಕಹಿ ನೆನಪುಗಳು!
ನೆನಪುಗಳು ಹಾಗೆನೇ
ಒಮ್ಮೊಮ್ಮೆ ಅಬ್ಬರಿಸುವ ಅಲೆಗಳಂತೆ
ಮನಸಿನ ಪುಟದ ಮೂಲೆಯಲ್ಲಿ
ಹಚ್ಚಹಸಿರಾಗಿ ಕುಳಿತಿವೆ ಯಾರು ಕಾಣದಂತೆ!
ಪ್ರಿಯಾಂಕ✍
- ಪ್ರಿಯಾಂಕ
04 Oct 2017, 12:55 pm
Download App from Playstore: