ನಗುವೆ ಮಾತಾದಾಗ ...

ಕಾಲೇಜಿನ ಮೊದಲ ದಿನ
ಮೊದಲ ಪರಿಚಯವೇ
ನಗುವಿನೊಂದಿಗೆ ಶುರುವಾಗಿತ್ತು
ಆ ತುಂಟು ನಗುವು,ಕಣ್ಣರೆಪ್ಪೆ
ಮನದ ಸಾಗರದಿ
ಪ್ರೀತಿಯ ಅಲೆಯ ಹಬ್ಬಿಸಿತ್ತು

ಪ್ರತಿದಿನವೂ ಅವಳ
ನಗುವಿಗೆ ಕಾಯುತ
ಕೂರುವುದೇ ಕೆಲಸವಾಗಿತ್ತು
ರಾತ್ರಿ ಬೇಡದಾಗಿ
ಚಂದಿರನಿಗೆ ಬೈಗುಳ ಸಾಕಾಗಿ
ಸೂರ್ಯ ಬೇಗ ಉದಯಿಸಿದಂತಿತ್ತು

ತಿಂಗಳು ಉರುಳುತಿದ್ದರು
ನಗುವಲ್ಲೇ ನಡೆತಿತ್ತು
ನಮ್ಮ ಉಭಯ ಕುಶಲೋಪರಿ
ನಗು ಮಾತಾಗುವ
ಸಮಯಕ್ಕಾಗಿ ಕಾದು ಕುಳಿತ
ಹೃದಯಕ್ಕೂ ಮೆಲ್ಲಗೆ ಕೋಪ ಬರತೊಡಗಿತ್ತು

ಮನಸಲ್ಲಿ ಮೂಡತೊಡಗಿದ್ದವು
ನೂರಾರು ಪ್ರಶ್ನೆಗಳು
ನಗುವುದು ಅವಳ ಖಾಯಿಲೆಯೇ ?
ಇಲ್ಲವೇ ನನ್ನ ಮುಗ್ದತೆಯೇ
ಬಂಡವಾಳ ಮಾಡಿಕೊಂಡು
ನನ್ನ ವಂಚಿಸಲು ಮಾಡುತಿರುವ ನಾಟಕವೇ ?

ತಾಳ್ಮೆ ಮೀತಿ ಮೀರಿ
ಕೋಪದ ತಾಪವು ಹೆಚ್ಚಾಗಿ
ಕೇಳಿಬಿಟ್ಟೆ ಕೊನೆಗೆ ಒಮ್ಮೆ ನಾನು
ನೀ ನನ್ನ ನೋಡಿ
ನಗುವುದು ಏತಕ್ಕಾಗಿ?
ಮತ್ತೆ ಆ ನಗುವೇ ಉತ್ತರವಾಗಿತ್ತು

ತಲೆ ಕೆಟ್ಟು ಕೈ ಮೇಲೆತ್ತಿದ್ದೆ
ಅಷ್ಟರಲ್ಲೇ ಅವಳ ಗೆಳತಿ
ಮಾತು ಕೇಳಿ ಹೃದಯ ನಿಂತಿತ್ತು...
ನನ್ನ ಹುಡುಗಿಯು ಮೂಕಳಂತೆ
ನಗುವಲ್ಲೇ ಮನಸ ಜೊತೆ ಮಾತನಾಡುತಿದ್ದ
ಅವಳೆಗೇ ಮೂಗಿ ಹಾಗಲು ಸಾಧ್ಯ?

ಪ್ರೀತಿಗೆ ಕಣ್ಣಿಲ್ಲ ಎಂದು ಕೇಳಿದ್ದೆ
ನನ್ನ ಪ್ರೀತಿಗೆ ಬಾಯಿರಲಿಲ್ಲ ಅಷ್ಟೇ
ಆದರೇನಾಯಿತು ಎಂದಿನಂತೆ
ಕಾಡುವ ಅವಳ ನಗೆಯುಂಟು
ನಗೆಯಲ್ಲೇ ಉತ್ತರ ಹುಡುಕುವ
ಪ್ರೀತಿಯ ಛಲವುಂಟು ನನಗೆ…..

ಗಾದೆಪ್ಪ

- ಗಾದೆಪ್ಪ

04 Oct 2017, 03:21 pm
Download App from Playstore: