.......

ಪ್ರೀತಿ ರಥದ ಮೇಲೇರಿ ಹೊರಡಲು
ಮಹಾರಾಜನು ನಾನಲ್ಲ......
ಸಡಿಲ ನಂಬಿಕೆಗೆ ಬೆರಳಿಟ್ಟು ಕಾಪಾಡೋ
ಕೆೃಕೇಯು ಅವಳಲ್ಲ......
ದುರಭಿಮಾನವೆಂಬ ಕುದುರೆಗಳಿಗೆ ಗೊತ್ತಿಲ್ಲ ಗುರಿಯಿಲ್ಲ
ಅಮಳ ಕಣ್ ಹೊಳಪಿನೊಳಗೆ
ಬರೀ ಮಸಣದ ಹೂವ ವಾಸನೆ....ˌ
ಉಸಿರ ಹಿಡಿದು ಕುಳಿತುಕೊಳ್ಳಲುˌಗೋರಿಕಟೋ ಯೋಚನೆ
ನೋಡೇ ಹುಡುಗಿ ಒಮ್ಮೆ
ಅದೆಂದೋ ಬರೆದಿಟ್ಟಂತ ಪ್ರೇಮ ಪತ್ರವೊಂದು
ನನ್ನನ್ನೇ ನೋಡಿ ಅಣಕಿಸುತ್ತಿದೆ....
ನನ್ನ ನಿಸಹಾಯಕತೆಯನ್ನು ನೋಡಿ
ಗಹಗಹಿಸಿ ನಗುವಂತಿಗೆ
ಬಂದು ಹೋಗೇ ಕಣ್ಣೀರ ಹೊಣೆಗಾರ್ತಿ
ನೆನಪಾಗುವ ಮುನ್ನ ಒಂದು ಸರತಿ .....

- Shilpa

04 Oct 2017, 07:37 pm
Download App from Playstore: