ಏರು ಜವ್ವನೆ !
ಚಿಗರೆಯ ಕಣ್ಣಿನವಳು
ಚೆಂದುಳ್ಳಿ ಹೆಣ್ಣಿವಳು
ಚೆಲ್ಲು ಚೆಲ್ಲು ಮಾತಾಡಿ
ಮನವನ್ನು ಮುದಗೊಳಿಸುವಳು.
ತಾರುಣ್ಯ ತುಂಬಿ ತುಳುಕಿದ ಕೆನ್ನೆ
ತುಳುಕಾಡುವ ಕುಡಿಕೆಯೊಳಗಿನ ಬೆಣ್ಣೆ
ನೀಳ ನುಣುಪಿನ ಮೂಗು
ನಯ ನಾಜೂಕಿನ ಬಾಗು
ಹಣೆಯ ಮೇಲಣ ಮೊಡವೆ
ಮುಗ್ದ ಚೆಲುವೆಗದೇ ಒಡವೆ
ಗುಲಾಬಿ ಎಸಳಿನ ತುಟಿಗೆ ಬಣ್ಣ
ತಂದು ಹಚ್ಚಿದರೇನೋ ತೊಂಡೆ ಹಣ್ಣ
ಚಂದ್ರಮುಖಿಯಿವಳ ಗಲ್ಲ
ಚೆಂದವನರಿತವನೆ ಬಲ್ಲ !
ಮಲ್ಲಿಗೆ ಮೃದುವಿನ ಪಾದ
ಜೊತೆಗೆ ಝಲ್ ಎನುವ ಗೆಜ್ಜೆ ನಾದ.
ಗುಂಗು ಹಿಡಿಸುವ ದನಿಯ ಮೋದ,
ಇವಳೊಂದು ಪ್ರೇಮದ ವೇದ!
ಶಿಲ್ಪದಲ್ಲಿ ಕಲೆಯನು ಕೆತ್ತಿ
ಕಡೆದಂತ ಯೌವ್ವನಗಿತ್ತಿ.
ಏರು ಜವ್ವನೆಯ ಬಣ್ಣಿಸಲು
ಹೊರಟ ಪದಗಳೆ ಹಳಸಲು!
- ಶ್ರೀಗೋ.
05 Oct 2017, 02:12 am
Download App from Playstore: