ನೀನಗಾಗಿಯೇ.

ಏನೆಂದು ಹೇಳಲಿ ಗೆಳತಿನೀನಿಲ್ಲದೇ
ಮನದ ತಾವರೆಯೂ ಮುದುಡಿ ಹೋಗಿದೆ
ತುಂತುರು ಸೂನೇಯು ಹವೆಯಾಗಿ ಸುಡುತ್ತಿದೆ
ನೀ ಬರುತಿದ್ದ ಹಾದಿಯು ಇಂದೇಕೋ
ಭೀಕೋ ಎನ್ನುವಂತಿದೆ

ನಿನ್ನ ಹೆಜ್ಜೆಯ ಗೆಜ್ಜೆಯ ಸದ್ದು
ಮರೆಯಾಗಿ ಅಡಗಿದೆ
ಇನ್ನೇನು ನಿನಗಾಗಿ ಚಂದಿರ ಬರುವನು
ನಿನ್ನ ಮುಗುಳು ನಗೆಯ ನೋಡಲು
ತಾರ ಬಳಗ ಹಾದಿ ಕಾಯುತ್ತಿವೆ
ನಿನ್ನ ಪಿಸು ದ್ವನಿ ಕೇಳಲು

ಬೆಳಕರಿದ ನಂತರ ಮರೆಯಾಗುವವೆನೊ
ಆದರೇ ನಾ ನಿನಗಾಗಿ ಕೊನೆವರೆಗೂ
ಕಾಯುತ್ತಾ ಇರುವೇನು ನೀ ಬರುವೆಯಲ್ಲವೇನು.

- ಅನಿಲಕುಮಾರ್.ಜಿ.

05 Oct 2017, 07:24 am
Download App from Playstore: