ಚೆಲುವು ಮೆಚ್ಚಿದ ಚೆಲುವೆ

ಚೆಲುವು ಕಂಡ ಕನಸಿಗೆ ರೂಪ ನೀನೆಂದು
ತಿಳಿದು ನಿನ್ನೆಡೆಗೆ ನಡೆದಂತಿದೆ ಚೆಲುವೆ..........

ಬಂಗಾರದ ಬಣ್ಣ ನಿನ್ನ ನೋಡಿ ಚಿನ್ನ ತಾನು ಹೊಳಪು ಕಳೆದು ಕೊಳ್ಳುವ ಭಯವಾಗಿ ನಿನ್ನಲ್ಲೇ ನೆಲೆಯಾದಂತಿದೆ...........

ನೀಲವೆನಿ ನಿನ್ನ ನಯನ ಮನೋಹರ ಮಾಯೆಯಂತೆ ಮತ್ತನ್ನು ಹರಿಸುತ್ತಿದೆ............

ಅಂಕು ಡೊಂಕು ನಿನ್ನ ನಡಿಗೆ ಸೊಂಟದ ಬಳುಕಲ್ಲಿ ನನ್ನ ಎದೆಯ ಬಡಿತ ಬಿದ್ದು ಕಾಡಿದೆ ನನ್ನ ಕನಸಲ್ಲಿ...............

ನಿನ್ನ ಕೋಮಲ ಕೇಶ ರಾಶಿ ಗಮ್ಮತ್ತಾಗಿ ನನ್ನ ಕದಿಯುತ್ತಿದೆ ವಯ್ಯಾರದ ಸರಣಿಯಲ್ಲಿ ಸಾಲದ ವರ್ಣನೆಯ ಪದಗಳಲ್ಲಿ...............

ಕಾಲ್ನಡಿಗೆ ಗೆಜ್ಜೆ ಸದ್ದು ಭುವಿಗೆ ನೀಕೊಡುವ ಸಿಹಿಯಾದ ಮುತ್ತು ಅದೃಷ್ಟ ನನಗಿಲ್ಲವೇ ಸೊಗಸಾದ ಸುಕುಮಾರಿ ನಿನ್ನ ಕೈಯಲ್ಲಿ ಜಲ್ಲೆನ್ನುವ ಬಳೆಯಾಗಳು...................

ಪ್ರತಿಯೊಂದು ಹೆಜ್ಜೆಗೆ ಜೊತೆಯಾಗುವ ನೆರಳಾಗಳು..........

ಅನು ಕ್ಷಣ ನಿನ್ನ ಕೆನ್ನೆಯ ಮುದ್ದಾಡುವ
ಸಿಂಗಾರದ ಕಿವಿಯೋಲೆಯಾಗಳು.........

- ಚುಕ್ಕಿ

05 Oct 2017, 01:24 pm
Download App from Playstore: