ಇರಬೇಕು ಹೇಗೆ ನೀನಿಲ್ಲದೆ?

ಕನಸೆಲ್ಲವಾ ಕರೆದೊಯ್ಯುವೆ
ಕಣ್ಣೀರಿನ ಜೊತೆಯಲ್ಲಿಯೇ
ತಿಳಿದು ಕೂಡ ಬಯಸುವೆಯ
ಮಸಣದ ಗೂಡು ಈ ಹೃದಯ

ಮರೆತೋಗಿರೋ ಮಾತೆಲ್ಲವ
ಮತ್ತೆತೇಕೆ ನೀ ನೆನಪಿಸುವೆ
ಎಂಥ ಕಲ್ಲು ಹೃದಯವು
ಕರಗಲೇಬೇಕು ಈ ಕಥೆಗೆ

ಬಳಿ ಬಂದರೆ ನೀ ಕೊರುಗುವೆ
ದೂರ ತಾಳದೆ ನಾ ಸಾಯುತಿರುವೆ
ಬೇಕೇ ಹೇಳು ಈ ಅಗ್ನಿಪರೀಕ್ಷೆ
ವಿರಹ ವೇದನೆಯ ತಾಳುವುದೇಗೆ

ನಿಜವಾಗಿಯೂ ನಾ ಸತ್ತರೂ
ನೆನಪಾಗಿಯೇ ನಿನ್ನ ಜೊತೆಯಿರುವೆನು
ಬಿಟ್ಟು ಬಿಡು ನೀ ಆತಂಕ
ಪ್ರೀತಿಗೇ ಗೆಲುವುಂಟು ಕೊನೆತನಕ

ಹುಸಿರಾಟವ ನಾ ಮರೆತರೆ
ಜ್ಞಾಪಿಸುವುದು ನಿನ್ನ ಕೆಲಸವು
ಸವಿಯುತ್ತ ನಿನ್ನ ಸೌಂದರ್ಯ
ಮರೆತೋಗ್ತಿದೆ ನನ್ನ ಸಾಹಿತ್ಯ.
ಗಾದೆಪ್ಪ

- ಗಾದೆಪ್ಪ

05 Oct 2017, 05:14 pm
Download App from Playstore: