.......

ಬಾನಂಗಳದ್ಯಾಗೆ ಬಿಡಿಸ್ಯಾನೆ
ಸೂರ್ಯನು ಬಣ್ಣದ ಚಿತ್ತಾರವನ್ನ
ರವಿವರ್ಮ ನೋಡಿ ನಾಚವ್ನೆ ನಗುತ್ತಾ ಹೊಗಳುತ್ತಾನಿಸರ್ಗದ ಮೈ ಮಾಟವನ್ನ

ತೆಲ್ಯಾವೆ ಮೋಡಗಳು ಗಾಳಿಲಿ ತೂರಾಡತ
ಬಿದ್ದಾವೇ ಜಗಳಕ್ಕೆ ಒಂದಕ್ಕೊಂದು ಗುದ್ದುತ್ತ
ಮರತಾವೇ ಮರುಕ್ಷಣವೇ ತಮ್ಮೆಲ್ಲ ಜಗಳನ
ಸುರಿಸುತ್ತ ಮಳೆಹನಿಯ ಭೂದೇವಿ ಮಡಲಿಗೆ

ಮರಗವ್ನೆ ಸೂರ್ಯನು ಧರೆಯನ್ನು ನೋಡುತ್ತಾ
ಹೇಳವ್ನೆ ನಿಲ್ಸೋಕೆ ತಿರುಗೋದುತನ್ನ ಸುತ್ತ
ನಗ್ತಾನೇ ನುಡಿದವಳೇ ಭೂದೇವಿ ತಿರುಗುತ್ತ
ನನ್ನ ಮಕ್ಳ ಕಾಯೋಕೆ ನಾ ಎಲದಕ್ಕೂ ಸಿದ್ದ.

ಹುಟ್ಟುತ್ತಾ ಕೆಂಪು,ಮುಳುಗುತ್ತ ಕೆಂಪು
ನಡುವೆ ಹುರಿಯುತ್ತ ಬೆಳಗವ್ನೆ ಲೋಕನಾ
ಇರುವರೆಗೂ ನಂದು ಒಂದೇನೆ ಬಣ್ಣವು
ಸಾರವ್ನೆ ನೇಸರನು ಬದುಕಿನ ಮರ್ಮ

ನಗ್ತವ್ನೆ ಚಂದ್ರನು ನೀರಲ್ಲಿ ನೋಡುತ್ತಾ ಪ್ರತಿಬಿಂಬ
ಆ ನಗುವೇ ಬೆಳಕಾಗಿ ಹರಡೈತಿ ಭೂಮಿಮ್ಯಾಗ
ನಳಿದಾವೆ ನಕ್ಷತ್ರ ಬಾನನ್ನು ಚುಂಬಿಸುತಾ
ಅಂಧಕಾರಕ್ಕೂ ಅಲಂಕರಿಸಿ ಒಳಿತನ್ನೇ ಬಯಸುತ್ತ

- ಗಾದೆಪ್ಪ

05 Oct 2017, 05:16 pm
Download App from Playstore: