ನಾ ಒಬ್ಬ ಕವಿಯಾಗಬಾರದಿತ್ತೇ..?

ನಿನ್ನ ತುಟಿಯಲ್ಲಿ
ಅಡಗಿ ಕುಳಿತಿಹೆನು
ಕಾಣುವೆ ಒಮ್ಮೆ ನೀ ನಕ್ಕರೆ
ಹಾಗೆಂದು ನೀನು
ತುಂಬಾನೇ ನಗಬೇಡ
ಬಂದಾರು ಬೇರೆಯವರು ನನ್ನ ಜಾಗಕೆ

ತುಂಬಾನೆ ಒಳ್ಳೆಯವ್ನು
ಅನ್ಕೊಂಡಿದ್ದೆ ನನ್ನ ನಾನು
ನಿನ್ನನ್ನು ಕಾಣೋ ಮೊದಲು ..
ಆಮೇಲೆ ತಿಳಿಯಿತು
ನಾ ಒಬ್ಬ ನರಮನುಷ
ಬಿಳುತಿಹುದು ಪೋಲಿ ಕನಸು..

ಕೆಂದಾವರೆ ತುಟಿಯು
ನೀಳ ನಿನ್ನ ಜಡೆಯೂ
ಉಯ್ಯಾಲೆ ಆಡೂತೈತಿ ಗಾಳಿಗೆ
ಬಿಗುಮಾನದ ನಡೆಯು
ನಗು ತುಂಬಿದ ಮೊಗವು
ಚೆಲ್ಲೈತಿ ಹುಣ್ಣಿಮೆಯ ಬೆಳಕು

ಯಾವ್ದುಕ್ಕು ನಿನ್ಮೇಲೆ
ಕೇಸ್ ಅನ್ನು ಹಾಕಿಬಿಡಲೇ
ಕೊಲ್ತಿಯ ನನ್ನ ಕ್ಷಣ ಬಿಡದೆ
ಹೃದಯಾನೇ ಜೈಲು
ಅಲ್ಲಿ ಸಿಗಲ್ಲ ಬೈಲು
ಇರಬೇಕು ಕೊನೆಯವರೆಗೆ....

ಹೊಗಳಿಕೆಯ ಹೂಮಾಲೆ
ಕಟ್ತಾನೇ ಇರುವೆನು
ನಿನೀಗೇ ನಗ್ತಾನೇ ಇದ್ರೆ
ಪದಗಳೇ ಸಾಲ್ತಿಲ್ಲ
ಯಾರನ್ನು ಬೇಡ್ಲಿ
ನಾ ಒಬ್ಬ ಕವಿಯಾಗಬಾರದಿತ್ತೇ
ಗಾದೆಪ್ಪ

- ಗಾದೆಪ್ಪ

05 Oct 2017, 05:19 pm
Download App from Playstore: