ಜಗಕ್ಕೆಲ್ಲ ತಳಿರ‌‌ ತೋರಣ

ಹಬ್ಬವಂತೆ ಅಲಂಕಾರವಂತೆ
ಮನೆಯ ಬಾಗಿಲಿಗೆ ತಳಿರ ತೋರಣವಂತೆ
ತಳಿರ‌‌ ತೋರಣ‌ ಕಟ್ಟಿ ದುಷ್ಟ ಶಕ್ತಿ‌ ತಡೆಯುವರಂತೆ
ನೆಮ್ಮದಿಯ ಸುಖವದರಲಿ ಅರಸುವರಂತೆ

ಜಗದೊಳಗೆ ಮನಸೊಳಗಿರಲು ದುಷ್ಟ ಮಹಾ ಮಾರಿ
ಹುಡುಕಾಡಿದರೇನು ಒಳ್ಳೆಯ ಫಲಕ್ಕಾಗಿ ಪರಿಪರಿ
ಕೊಡಬಹುದು ಕೊಂಚ ನೆಮ್ಮದಿ ದುಷ್ಟತನದ ಸವಾರಿ
ಅದೆಂದೂ ಮನ, ಮಾನವನಿಗೆಂದು ಅಪಾಯಕಾರಿ

ಮನಸೊಳಗಿದ್ದರೆ ಪ್ರೀತಿ ಪ್ರೇಮದ ಹೂರಣ
ಜಗಕ್ಕಂಚಿ ಆಗ ನೇ ಕಿ ದೆ ‌ನೆಮ್ಮದಿಯ‌ ಸಾರಲು ಕಾರಣ
ಆದರೆ ಜಗದೊಳಗಿನ‌ ಈ ನೋವುಗಳ ಮಾರಣ
ಅದೇ ಅಲ್ಲವೆ ಮನೆ ಮನ ಜಗಕ್ಕೆಲ್ಲ ಕಟ್ಟಿದ ತಳಿರ ತೋರಣ

- ಶ್ರೀಕಾವ್ಯ

05 Oct 2017, 06:22 pm
Download App from Playstore: