ಕೊರವಂಜಿ

ನಾನೊಬ್ಬಳು ಕೊರವಂಜಿ
ನನ್ನ ಹೆಸರು ಸಿರಿವಂಜಿ!!
ನನ್ನ ನುಡಿಯು ಅಪರಂಜಿ
ನೀ ಕೇಳು ಗುಲಗಂಜಿ!!

ಕಣ ಕಣದಲ್ಲೂ ಕಣಿಯ
ನುಡಿಯುವುದು ನನ್ನ ಕಾಯ!!
ನೀ ಕೇಳಲು ನನ್ನ ದನಿಯ
ನಾ ನುಡಿಯುವೆ ಮರು ದನಿಯ!!

ಊರೂರು ಅಲೆಯುತಲಿ
ತಿರುಗುವ ನಾ ಕೊರವಂಜಿ!!
ನೀ ಹೋಗದಿರು ಅಂಜಿ
ನನ್ನ ನುಡಿಯು ಅಪರಂಜಿ!!

ಅಂಗೈಯಲ್ಲಿನ ಬರಹ
ತಿಳಿಸುವುದು ನಿನ್ನ ಕುರುಹ!!
ಮುಖ ಲಕ್ಷಣ ನೋಡಿದರೆ
ನಾ ನುಡಿಯುವೆ ನಿನ್ನ ಕಥೆಯ!!

- ಪಿ.ಜಿ.ಜ್ಯೋತಿ

05 Oct 2017, 08:31 pm
Download App from Playstore: