*ಜೊತೆಯಾದವಳು*

ಶಶಿಯು ಮೂಡಿದ ಹೊತ್ತು
ಜೊತೆಯಾಗಿ ನೀ ಬಳಿಯಿರಲು
ನನ್ನ ಕಣ್ಣಲಿ ತುಂಬಿಕೊಂಡೆನು
ಚಂದ್ರನ ಬೆಳಕಲ್ಲಿ ನಿನ್ನ ಮೊಗವನು!

ಆಗಸದಿಂದ ಬಿದ್ದ ಮಳೆಗೆ
ಹಚ್ಚಹಸಿರಾಯಿತು ಭೂಮಿ
ನಿನ್ನೊಂದು ನಗುವಿಗೆ
ತಂಪಾಯಿತು ಹೃದಯದ ಮರುಭೂಮಿ!

ಆಸೆಗಳೆಲ್ಲ ಬತ್ತಿಹೋದ ಜೀವಕೆ
ಹೊಸ ಕನಸುಗಳನ್ನು ಮೂಡಿಸಿದೆ.
ಪ್ರೀತಿ ಕಾಣದ ಬರಡು ಹೃದಯದಲಿ
ಪ್ರೀತಿಯ ಮಳೆಯನ್ನು ಸುರಿಸಿದೆ!

ನೀನೆ ನನ್ನ ಚಂದನದ ಗೊಂಬೆ
ನನ್ನೀ ಬಾಳಿನಲ್ಲಿ ಬೆಳಕನ್ನು ತಂದೆ
ನೀ ಜೊತೆಗಿದ್ದರೆ ಸಾಕು
ಬೇರೆನು ಬೇಕಿಲ್ಲ ಈ ಹೃದಯಕೆ!

ಪ್ರಿಯಾಂಕ✍

- ಪ್ರಿಯಾಂಕ

06 Oct 2017, 11:38 am
Download App from Playstore: