ಕಲರವ

ಅಪರಿಚಿತರಾಗಿಹ ನಮ್ಮನ್ನು ಪರಿಚಿತರಾಗಿಸಿ
ಎಲ್ಲರನ್ನು ಒಂದಾಗಿಸಿದೆ ಕಲರವ
ಸುಃಖ ದುಃಖಗಳನ್ನು ಹಂಚಿಕೊಂಡು
ಮರೆಯುತ್ತೇವೆ ನಮ್ಮ ನೋವ!

ತಮ್ಮ ನೋವುಗಳ ಹಂಚಿಕೊಂಡರೆ
ಸಮಧಾನದ ನುಡಿಗಳನ್ನು ಹೇಳುತ್ತ
ನೋವಿನ ಮನಸುಗಳಿಗೆ
ಮುಲಾಮು ಹಾಕುವರು ನಗಿಸುತ್ತ!

ಜಾತಿ ಮತ, ಮೇಲು -ಕೀಳು ಎನ್ನುವ
ಭೇದ ಬಾವವಿಲ್ಲದ ನಮ್ಮ ಕುಟುಂಬ.
ಅಕ್ಕ-ತಂಗಿ, ಅಣ್ಣ-ತಮ್ಮ
ಸ್ನೇಹಿತರಿರುವರೆಲ್ಲ ತುಂಬ ತುಂಬ!

ಕವಿ ಮನಸುಗಳಿಗೆ ವೇದಿಕೆಯಾದರೆ
ಓದುವ ಖುಷಿ ಸಿಹಿಮನಸುಗಳಿಗೆ.
ಎಷ್ಟೇ ವರುಷಗಳು ಕಳೆದರೂ
ನಮ್ಮ ನಿಮ್ಮ ಕಲರವದಲಿ
ಬಾಂಧವ್ಯದ ನಂಟು ಹೀಗೆ ಇರಲಿ!

- ಪ್ರಿಯಾಂಕ

06 Oct 2017, 09:43 pm
Download App from Playstore: