ಸ್ನೇಹದ ಸಮಯ
ಹಿಮಾಲಯದಸ್ಟು ಎತ್ತರ ನಮ್ಮ ಸ್ನೇಹ,
ಬರಡಾದ ಬದುಕಿಗೆ ಭಾವನೆಗಳ ಚಿಲುಮೆ ಈ ಸ್ನೇಹ,
ಸೋತ ಮನಸಿಗೆ ಸ್ಪೂರ್ತಿ ಈ ಸ್ನೇಹ,
ನಡೆದಸ್ಟು ದೂರ ಜೊತೆಗಿರುವುದೀ ಸ್ನೇಹ,
ಕೊನೆಯೆಂಬುದ ಕಾಣದ ಈ ಸ್ನೇಹ,
ಪದಗಳಲಿ ಬರೆಯಲಾಗದ, ಮಾತಿನಲ್ಲಿ ಹೇಳಲಾಗದ ಈ ಸ್ನೇಹ,
ತನಗಾಗಿ, ತನ್ನವರಿಗಾಗಿ, ತನು ಮನವ ಧಾರೆಯೆರೆಯುವ ಸ್ನೇಹ,
ಅಡೆ ತಡೆ ಇಲ್ಲದೆ, ಕೊನೆ ಮೊದಲಿಲ್ಲದೆ, ಹಸ್ತ ಚಾಚಿದೆ ಈ ಸ್ನೇಹ,
ಆದಿಯನ್ನು ಮಾತ್ರ ಕಂಡು ಅಂತ್ಯವನ್ನೇ ಕಾಣದ ಈ ಸ್ನೇಹ,
ಎಂದೆಂದೂ ಶಾಶ್ವತವಾಗಿರಲು ಈ ಸ್ನೇಹ.....
- ರಾಜೇಶಕಿಚ್ಚ
07 Oct 2017, 04:55 pm
Download App from Playstore: