ತಿಳಿಯಾದ ನಿನ್ನ ಪ್ರೇಮ

ಸಾಗರದಂತೆ ತಿಳಿಯಾದ ನನ್ನ ಎದೆಯಲ್ಲಿ
ನೀ ಬಂದೆ ಪೂರ್ಣ ಚಂದಿರನ ಬಿಂಬದಂತೆ!!
ಸ್ವಚ್ಛಂದ ಮನಸಿನ ಕಾಗದದಲ್ಲಿ
ನೀ ಬರೆದೆ ಪ್ರೇಮ ಕವಿತೆ!!

ಈ ನನ್ನ ಎದೆಯ ಹೃದಯ ಮೃದಂಗ
ನುಡಿಸಿದ ವಾದ್ಯಗಾರ ನೀನು!!
ನನ್ನೊಳಗಿನ ಹೊಸ ಭಾವಕ್ಕೆ
ಜೀವ ತಳೆದ ಸಂಗೀತ ಲಹರಿಯು ನೀನು!!

ಅಂದು ಕಣ್ಣಲ್ಲೇ ನನ್ನ ಸೆಳೆದು
ಹೃದಯದ ಬಾಗಿಲು ಬಡಿದ ಪೋರ!!
ಸದ್ದಿಲ್ಲದೇ ಹೃದಯಕ್ಕೆ ಪ್ರವೇಶ ಮಾಡಿ
ಪ್ರೀತಿಯನ್ನು ಆಳುತ್ತಿರುವ ಹೃದಯ ಚೋರ!!

ಮುನಿಸು ಸಂಶಯ ಎಂಬ ಗಾಳಿಯೂ
ಸನಿಹ ಸುಳಿಯದಂತೆ ಜೊತೆಯಾದೆ ನೀನು!!
ನಿನಗಾಗಿಯೇ ಮಿಡಿಯುವ ಈ ನನ್ನ
ಹೃದಯದ ಪ್ರತಿ ಮಿಡಿತವೂ ನೀನೇ!!

ಸಾವಿರ ಬಯಕೆಗಳ ಕೂಡಿ ಹೆಣೆದಿರುವ
ಬದುಕಿನ ಸೂತ್ರ ಹಿಡಿದಿರುವವನು ನೀನು!!
ಈ ಜನುಮಕೆ ನನ್ನ ಜೊತೆಯಾದ
ಸಂಗಾತಿಯೇ ನಿನಗೆ ನನ್ನ ಕೋಟಿ ವಂದನೆ!!

- ಪಿ.ಜಿ.ಜ್ಯೋತಿ

07 Oct 2017, 09:20 pm
Download App from Playstore: