*ಕಾದಿರುವೆ ನಿನಗಾಗಿ*
ನಿನ್ನ ಕಾಲ್ಗೆಜ್ಜೆ ಸದ್ದುಗಳನು
ಮತ್ತೆ ಕೇಳಬೇಕು ನಾನಿಂದು
ನೀ ನನ್ನಿಂದ ದೂರಾದರೂ
ಮರೆಯಲಾಗದು ನಿನ್ನ ನೆನಪನೆಂದು!
ನೀ ಹಚ್ಚಿಹೋದ ದೀಪವೊಂದು
ಕಣ್ಣೀರಿನಲಿ ಬೆಳಗುತಿದೆ ಇಂದು
ಕಣ್ಣೀರು ಬತ್ತಿಹೋಗುವ ಮುನ್ನವೇ
ಪ್ರೀತಿಯ ಧಾರೆಯನು ಹರಿಸಬೇಕಾಗಿದೆ ನೀನಿಂದು!
ಮೌನ ಹೃದಯ ನಿನ್ನ ನೆನಪಾಗಿ
ಮೌನವಾಗಿ ರೋಧಿಸುತ್ತಿದೆ
ನಿನ್ನ ಪ್ರೀತಿಯ ಒಂದು ನುಡಿಗಾಗಿ
ಈ ಜೀವ ಕಾದು ಕುಳಿತಿದೆ ನಿನಗಾಗಿ!
ನೀ ಬಿಟ್ಟು ಹೋದ ಗೆಜ್ಜೆಯಿಂದು
ತನ್ನ ಸದ್ದನೇ ಮರೆತಂತಿದೆ
ಯಾಕಿಷ್ಟು ಹಠವ ಮಾಡಿರುವೆ
ನನ್ನ ಕೂಗು ನಿನಗೆ ಕೇಳಿಸದೆ!
ಪ್ರಿಯಾಂಕ✍
- ಪ್ರಿಯಾಂಕ
10 Oct 2017, 04:26 pm
Download App from Playstore: