ಕನ್ನಡ ಕವನ
ಮನನೊಂದು ದೂರವಾಗುವುದು
ಮನಸಲ್ಲೇ ಮತ್ತೆ ಚಿಗುರಿಸುವುದು
ಈ ಕವನ ನನ್ನಲ್ಲಿ.
ಕಂಬನಿಯಲ್ಲಿ ಜೊತೆಯಾಗುವುದು
ಸಂತೋಷದಲ್ಲಿ ನಗುವಾಗುವುದು
ಈ ಕವನ ನನ್ನಲ್ಲಿ.
ಅನ್ಯಾಯಗಳ ಹೆದರಿಸಿ ವಿಪರ್ಯಾಸ ಮಾಡುವುದು ಸ್ವಾರ್ಥಪರರ ಕೆನ್ನೆಗೆ ನಾಚಿಕೆಯಿಲ್ಲವೆಂದು ಹೊಡೆಯುವುದು ಮಾತಿಲ್ಲದೆ ಪದಗಳಿಂದಲೇ ಈ ಕವನ ರೂಪವಿಲ್ಲದೆ ಬಹುರೂಪಿಯಾಗಿದೆ ನನ್ನಲ್ಲಿ.
ಕವಿಗಳ ಕನಸು ನಾಡ್ನುಡಿಗಳ ಬಳಕೆಯ ಮುರಿಸು ಕಾಣದ ದೃಶ್ಯಗಳು ಕಾಣುವ
ಸತ್ಯಗಳು ನಯನಳಿಂದ ಬಿಸಿಡಿ ಬಣ್ಣಿಸು ಪ್ರತಿಯೊಂದು ಸಾಲಿನಲ್ಲಿ ನನ್ನ ಕವನದಲ್ಲಿ.
- ಚುಕ್ಕಿ
10 Oct 2017, 05:02 pm
Download App from Playstore: