ನಿನ್ನೊಲವು
ನಿನ್ನೊಲವು ಪ್ರೀತಿ ತುಂಬಿದ ಒರತೆ
ಬೆಳಗುತಿದೆ ನನ್ನೊಲವ ದೀಪದಂತೆ
ನೀನಿರಲು ಎಂದಿಗೂ ನನ್ನ ಜೊತೆ
ಬಾಳಲಿ ನನಗೆಲ್ಲಿಹುದು ಕೊರತೆ
ಕನಸಿರಲಿ ನನಸಿರಲಿ ಅದರಲಿ ನಿನ್ನದೆ ಹೆಸರಿರಲಿ
ಸರಸವೋ ವಿರಸವೋ ನೀನೆ ಅದರಲಿ ಆವರಿಸಿರಲಿ
ಸೋಲೊ ಗೆಲುವೋ ಎಲ್ಲವೋ ನಿನಗಾಗಿಯೆ ನನ್ನಲಿ
ನನ್ನ ಉಸಿರು ಸೇರಿ ಹೋಗಲಿ ಕೊನೆಯವರೆಗೆ ನಿನ್ನುಸಿರಲಿ
ತಾಯ ಮಡಿಲು ಅಪ್ಪನ ಕೋಪದ ಸಿಡಿಲು
ಗುರು ತೋರೊ ದಾರಿ, ಗೆಳತಿಯ ಸ್ನೇಹದಮಲು
ನೀನೆ ಎಲ್ಲಾ ನನ್ನ ಬಾಳ ಹಾದಿಗೆ ದೀವಟಿಗೆ ಹಾಗೆ
ಮುನ್ನಡೆಸು ನನ್ನ ಹೀಗೆ ಎಂದೂ ಬೆಳಕಿಗೆ ಕೊನೆಯಿರದ ಹಾಗೆ
- ಶ್ರೀಕಾವ್ಯ
10 Oct 2017, 05:55 pm
Download App from Playstore: