ನೀನಚ್ಚಿಟ್ಟ ದೀಪ
ನನ್ನೆದೆಯ ಅಂಗಳದಲಿ
ನೀನಚ್ಚಿಟ್ಟ ಪ್ರೀತಿಯ ದೀಪ
ನನ್ನೊಲವ ಬೆಳಗುತಿದೆಯೊ ಸುಡುತಿದೆಯೊ
ಅರೆಯದಾಗಿರುವೆನು ನಾನೀಗ
ಬೇಗ ಬಂದು ನೋಡಲಾರೆಯ ನೀನೀಗ
ಸುಡುವಾಗ ದೀಪವ ಆರಿಸುವ ಬಯಕೆ
ಆರಿದರೆ ಕತ್ತಲಾವರಿಸುವದೆಂದು ಹೆದರಿಕೆ
ಏನು ಮಾಡಲಿ ತೋಚದಾಗಿದೆ ನನ್ನೊಳಗೆ ಹೀಗೆಕೆ
ಬುದ್ಧಿ ಹೇಳುತಿದೆ ನಿನ್ನದೆಯ ನೀನೆ ಸುಡುತಿರುವೆ ಜೋಕೆ
ಅನಂತರ ನೀನೆ ಪಶ್ಚತ್ತಾಪ ಪಡುಬೇಕು ತಿಳಿಯೆ ಮಂಕೆ
ಶುರುವಾಗಿದೆ ಏನೇನೊ ಅಂಜಿಕೆ ನನ್ನಲಿ
ನಿನ್ನೊಲವ ಪ್ರೇಮದ ದೀಪ ನನ್ನ ಬಾಳ ಬೆಳಗಲಿ
ಬೇಗ ಬಂದು ಉಸಿರಿಬಿಡು ಬೆಳಗುವ ಬೆಳಕು ಈ ದೀಪ ನಿನ್ನ ಬಾಳಲಿ
ನಾನೆಂದು ಹುಡುಕೆನು ಹುಳುಕು ನನ್ನೆದೆಯ ಸುಟ್ಟರು ಸುಡಲಿ
ನಗುನಗುತ ಬಾಳ ಕಳೆಯುವೆನು ಪ್ರೀತಿಯಿಂದ ನಿನ್ನ ತೋಳಲಿ
- ಶ್ರೀಕಾವ್ಯ
10 Oct 2017, 05:55 pm
Download App from Playstore: