ಸೋದರಿ

ಓ ಸೋದರಿ
ನೀ ಇಂದು ನನ್ನ ಜೀವ

ಈ ಬರಿದಾದ ಹೃದಯದ ಕಡಲಿನಲಿ
ನಿನ್ನ‌ಪ್ರೀತಿಯ ಅಲೆ ಏಬ್ಬಿಸಿದೆ
ಆ ಅಲೆಯೊಳಗೆ ನಾ ಗೊತ್ತಿಲ್ಲದೆ ಬಂಧಿಯಾದೆ..
ನಿನಗೊಮ್ಮೆ ಹುಸಿಮುನಿಸು
ಬಂದಿರಲು
ನಾ ನೀರಿನಿಂದ ಹೊರಗೆ ಬಿದ್ದ
ಮೀನಿನಂತೆ
ನೀ ಒಮ್ಮೆ ಮಾತನಾಡಿದರೆ
ನನಗಾಗುವುದು
ಆ ಕ್ಷೀರ ಸಾಗರವೇ ಕುಡಿದಂತೆ

ಅಷ್ಟೊಂದು ಪ್ರೀತಿಯಿದೆ
ನನಗೆ ನಿನ್ನಲ್ಲಿ‌
ಪದಗಳೇ ಸಾಲುತ್ತಿಲ್ಲ
‌‌ ‌ ‌ನಿನ್ನ ವರ್ಣಿಸಲು ನನಗಿಲ್ಲ...
ಮುಗ್ಧ ಮನಸು

- mahesh

11 Oct 2017, 08:37 pm
Download App from Playstore: