ಹನಿಗವನ

ನಗುತಿದ್ದಳು ನನ್ನ ಹುಡುಗಿ
ನನ್ನ ಕಂಡಾಗಲೆಲ್ಲ
ಕಾರಣ ಗೊತ್ತಿದಿಲ್ಲ
ಮೊನ್ನೆ ಮದುವೆಯಾಗುವವರೆಗೆ
ಹೇಳಿದಳು ಕೊನೆಗೆ
ಕಾರ್ಟೂನ್ ಕಂಡರೆ ಅವಳಿಗೆ ನಗೆ

ಚುನಾವಣೆ ಪ್ರಚಾರಕೆಂದು
ಹೆಂಗಸರಿಗೆಲ್ಲ ಸೀರೆ
ಹಂಚಿದ್ದ ರಾಜಕಾರಣಿಯೊಬ್ಬ
ಸೀರೆ ತೊಟ್ಟು
ಕನ್ನಡಿ ಮುಂದೆ ನಿಂತ ನಾರಿಯರು
ಮರೆತೇ ಬಿಟ್ಟರು ಮತದಾನವನ್ನು..



ಅವಳ ನೋಡಿದಾಗಲೆಲ್ಲ
ಹೇಳುತಿದ್ದ ಇವ
ಅವಳೆಂದು ನನ್ನವಳೇ
ಮದುವೆ ಆಗಿ
ಅವಳಿಗೆ ಎರಡು ಮಕ್ಕಳು
ಇವನು ಇನ್ನು ಸಿಂಗಲ್ಲೇ ….

ರೇಡಿಯೋದಲ್ಲಿ ಪ್ರಕಟಣಾ
ಮೋಡ ಕವಿದ ವಾತಾವರಣ
ಭಾರಿ ಮಳೆ ನೀರಿಕ್ಷೆ
ಸುಡುವ ನೆಲವ
ಕಣ್ಣು ಕುಕ್ಕೋ ಸೂರ್ಯನ
ನೋಡಿ ನಕ್ಕನು ತಿಪ್ಪೇಶಿ ..
ಗಾದೆಪ್ಪ.

- ಗಾದೆಪ್ಪ

12 Oct 2017, 09:14 am
Download App from Playstore: