ಜೀವನ ಪಯಣ
ಸೋಜಿಗ ಈ ಜೀವನ ಪಯಣ
ತನ್ನೊಳಗಿಟ್ಟಿದೆ ಕಾಣದ ಹಲವು ತಾಣ
ನೋಡುತ ಸಾಗು ಎಂದಿಗೂ ಆಗದೆ ನಿತ್ರಾಣ
ವಿರಮಿಸು ಸಿಕ್ಕಾಗ ಒಂದೊಂದು ನಿಲ್ದಾಣ
ತುಟಿಯ ಮೇಲಿರಲೊಂದು ಹೂ ನಗೆ
ಮನಸಿನೊಳಗೆ ಬೆಳೆದಿರಲಿ ಪ್ರೀತಿಯ ಮಲ್ಲಿಗೆ
ಯಾರೆ ಬರಲಿ ಯಾನದ ಜೊತೆ ಜೊತೆಗೆ
ಸಂತಸವ ಹಂಚುತ್ತ ಸಾಗಿಬಿಡು ಕನಸಿನ ಊರಿಗೆ
ಜಗದಲಿ ಕಷ್ಟ ನೋವಿಲ್ಲ ಯಾರಿಗೆ
ನೋವೆನಿಸಿದರೆ ಅತ್ತು ಬಿಡು ಮೆಲ್ಲಗೆ
ಪಿಸುನುಡಿ ನೋವಿನಲಿ ಜಾರುವ ಕಂಬನಿಗೆ
ಹೊತ್ತೋಗು ಈ ನೋವಿನ ನೆನಪ ನಿನ್ನೊಟ್ಟಿಗೆ
ತಪ್ಪು ಮಾಡಿದಾಗ ಒಪ್ಪಿಬಿಡು ಶಿರಬಾಗಿ
ಮೋಸ ಕಂಡಾಗ ಒಪ್ಪದಿರು ಮೌನವಾಗಿ
ನೊಂದವರ ಕಂಡಾಗ ಅಪ್ಪಿ ಸಾಂತ್ವನಿಸು ಮಾನವನಾಗಿ
ಸೋತಾಗ ಗೆದ್ದಾಗ ಹೆದರದೆ ಹಿಗ್ಗದೆ ಸ್ವೀಕರಿಸಿಬಿಡು ಸಮವಾಗಿ
ಬಾಳ ಪಯಣವು ಒಮ್ಮೊಮ್ಮೆ ಅತಿ ವಿಸ್ಮಯ
ಇನ್ನೊಮ್ಮೆ ಅನಿಸುವುದು ಎಲ್ಲವೂ ಅಯೋಮಯ
ಬಂದದ್ದೆಲ್ಲ ಅನುಭವಿಸಿಬಿಡು ನೀನಾಗಿ ತನ್ಮಯ
ಆಗ ಪಯಣ ಕ್ಷೇಮವಾಗಿ ಸಾಗಿ ಅನಿಸುವುದು ಸುಂದರಮಯ
- ಶ್ರೀಕಾವ್ಯ
12 Oct 2017, 02:17 pm
Download App from Playstore: