*ಸೋಲಿನ ಪಯಣ*
ನಿನ್ನದೇ ಭಾವಚಿತ್ರದ ಎದುರಿನಲಿ
ಕವನ ಗೀಚುತ್ತಿರುವೆ ನಾನಿಲ್ಲಿ
ನಿನ್ನ ಮನದ ಮಾತುಗಳ ಕೇಳಲು
ಹೃದಯ ಬಯಸುತ್ತಿದೆ ನನಗಿಂದು!
ನಿನ್ನ ಮೊಗವ ನೋಡಲು
ಬಯಸುತ್ತಿದೆ ಮನವಿಂದು...
ಕನಸು ನನಸಾಗುವ ಮೊದಲೇ
ನನ್ನಿಂದ ದೂರಾದೆ ಯಾಕಿಂದು..
ನಿನ್ನೊಂದಿಗೆ ಕಳೆದ ನೆನಪುಗಳು
ಹೃದಯವ ಚುಚ್ಚಿ ಕೊಲ್ಲುತ್ತಿದೆ ಇಂದು,
ಈ ಜೀವ ಸಾಕೆನಿಸಿದೆ ನನಗೆ
ಎಲ್ಲಿದ್ದರೂ ನೀ ಸುಖವಾಗಿರು ಎಂದೆಂದೂ!
ಸಾಗುತ್ತಿದೆ ನನ್ನೀ ಪಯಣ
ಯಾರ ಅರಿವಿಗೂ ನಿಲುಕದಂತೆ
ಏಕಾಂಗಿಯಾಗಿ ಸಾಗಿರುವೆನು
ಮರಳಿ ಬಾರದ ಲೋಕಕ್ಕಿಂದು!
ಪ್ರಿಯಾಂಕ✍
- ಪ್ರಿಯಾಂಕ
12 Oct 2017, 06:30 pm
Download App from Playstore: