ಆ ಕಣ್ಣುಗಳು..
ಆ ಕಣ್ಣುಗಳು ಕಾಡುತ್ತಿವೆ ನನ್ನ,
ಮತ್ತೊಮ್ಮೆ ಮಗದೊಮ್ಮೆ
ಎತ್ತೆತ್ತ ಹೋದರೂ ಬಂದು
ಬೆಂಬಿಡದೆ ನೋಡುವವು
ಕೊಂದು ಬಿಡುವಂತೆ.
ಎಲ್ಲಿದ್ದೆನೋ ನಾನು,
ಹೇಗೆ ಸಿಗೆ ಬಿದ್ದೆನೋ ಇವಕ್ಕೆ
ತಪ್ಪಿಸಿಕೊಳ್ಳಲಾಗದ ಕೈಕೋಳ
ತಪ್ಪಿಕೊಂಡರೊಮ್ಮೆ ನಿರುಮ್ಮಳ.
ದೃಷ್ಟಿಯಿಟ್ಟು ನೋಡಲಾರೆ,
ತಿವಿದು ಹಾಕುವಂತಹ ಮೊನಚು ನೋಟ
ನಿಲ್ಲದಾಗಿದೆ ನನ್ನೀ ಓಟ
ತಿರುಗಿ ನೋಡಿದರೆ ಕಂಗಳ ಕಾಟ
ಕೊನೆಯಾಗುವುದೆಂದೋ ಈ ಬದುಕಿನಾಟ.
- ಶ್ರೀಗೋ.
12 Oct 2017, 08:27 pm
Download App from Playstore: