ರೌದ್ರಾವತಾರ

ವ್ರತಪೂಜಾದಿಗಳ ಫಲವಾಗಿ
ನೊಂದ ಮನಗಳಿಗೆ ವರವಾಗಿ
ಬರಗಾಲ ದೂರ ಮಾಡಿ
ಹರಿಯುತಿಹೆ ಮಾಡುತ ಮೋಡಿ

ನರ್ತನೆಯ ಮಾಡುತಿಹವು
ಹಳ್ಳ-ಕೊಳ್ಳ ನದಿಗಳು
ನಿನ್ನ ಸೆಳೆತಕ್ಕೆ ಕೊಚ್ಚಿಹೋಗಿಹವು
ಮನೆ-ಮಠ ಜೀವಗಳು

ದಶಕಗಳಿಂದ ಬರಿದಾಗಿದ್ದ
ನದಿಗಳಿಗೆ ಪುನರ್ಜನ್ಮ ನೀಡಿಹೆ
ಕೆರೆಗಳ ಕಟ್ಟೆ ಹೊಡೆದು
ಜೀವ ಹಾನಿಗಳ ಮಾಡಿಹೆ

ನೀ ಧರೆಯ ತಾಗೆಂದು
ಮೊರೆಯಿಟ್ಟವರು ನಾವೆ ಅಂದು
ನಿನ್ನ ರೌದ್ರಾವತಾರವ ನಿಲ್ಲಿಸೆಂದು
ಅಂಗಲಾಚುತಿರುವೆವು ಇಂದು




ಶಾರಧ

- ಶಕುಂತಲಾ

12 Oct 2017, 10:19 pm
Download App from Playstore: