*ಬಂದುಬಿಡು ಒಮ್ಮೆಯಾದರೂ*

ಕೇಳುವವರು ಯಾರು ಇಲ್ಲ
ನನ್ನಲ್ಲೇ ಹುದುಗಿರುವ ನೋವಿನ ಕಥೆಯ
ಏಕಾಂಗಿ ಜೀವನ ನನ್ನದು
ಯಾರು ತಿಳಿಯರು ನನ್ನ ವ್ಯಥೆಯ!

ನೀ ನನ್ನೊಡಲೊಳಗೆ ಜನಿಸಿದೆ ಎಂದು
ಸಂಭ್ರಮದಿ ತೇಲುತ್ತಿದ್ದೆ ಅಂದು
ಪ್ರೀತಿಯ ಮೋಹಕ್ಕೆ ಸಿಲುಕಿ
ನನ್ನನೇ ಮರೆತೆಯಾ ನೀನಿಂದು!

ನೊಂದು ಬೆಂದ ಹೃದಯಕೆ
ಆಸರೆಯಾಗದೆ ನಡೆದುಬಿಟ್ಟೆಯಲ್ಲಾ
ಈ ತಾಯಿಯ ಕೈತುತ್ತಿನ
ಪ್ರೀತಿ ನೆನಪಾಗುವುದು ನಿನಗೆಂದೊ!

ನೋವಿನಲ್ಲಿಯೇ ದಿನಗಳೆಯುತಿರುವೆನು ನಾನಿಂದು
ದಿನವೂ ನಿನ್ನದೇ ನೆನಪು ನನಗಿಂದು
ಹೆತ್ತು ಹೊತ್ತು ಸಾಕಿದೆ ನಾನಂದು
ಮರೆತಿದ್ದರೆ ನೆನಪಿಸಿಕೊ ಬಳಿಬಂದು!

ಕಣ್ಣೀರಿನ ಜೊತೆಯಲ್ಲಿ
ಬಹುದೂರ ಸಾಗಿರುವೆನು
ಭರವಸೆಗಳ ಬದುಕಿನಲ್ಲಿ
ಶಬರಿಯ ಹಾಗೆ ಕಾದು ಕುಳಿತಿರುವೆನು!

ಪ್ರಿಯಾಂಕ✍

- ಪ್ರಿಯಾಂಕ

13 Oct 2017, 02:08 pm
Download App from Playstore: