ಯಾರವಳು.....

ತುಂಟ ನಗೆಯನ್ನು ಚೆಲ್ಲಿ
ಕಣ್ಣಲ್ಲೇ ನನ್ನ ಸೆರೆಯಾಗಿಸಿ
ನನ್ನ ಇರುವಿಕೆಯನ್ನು ಮರೆಸಿ
ಮರೆಯಾಗಿಬಿಟ್ಟಳಲ್ಲ, ಯಾರವಳು!

ಅವಳ ಏಕಾಂತವ ಬಯಸಿ ಮನವಿಂದು
ಹುಚ್ಚನಂತೆ ಅಲೆಯುತ್ತಿದೆ,
ಸಮಯದ ಅರಿವು ಇಲ್ಲದಂತೆ
ನನ್ನ ಕೊಲ್ಲುತ್ತಿದ್ದಳಲ್ಲ, ಯಾರವಳು!

ಬೀಸುವ ತಂಗಾಳಿಯ ಜೊತೆಯಲ್ಲಿ
ತನ್ನುಸಿರನು ಸೇರಿಸಿ
ಸದ್ದಿಲ್ಲದೆ ನನ್ನುಸಿರಿನಲಿ ಬೆರೆತು
ಹೃದಯವ ಕದ್ದಳಲ್ಲ, ಯಾರವಳು!

ಕಣ್ಣರೆಪ್ಪೆಯೊಳಗೆ ಅಡಗಿ ಕುಳಿತವಳು
ಕಣ್ತೆರೆದರೆ ಕಾಣಿಸದವಳು
ಕನಸಲ್ಲೂ ಕಾಡುತಿಹಳು
ಹುಡುಕಿದರೆ ಸಿಗದವಳು, ಯಾರವಳು!

- ಮಳೆಯಲ್ಲಿ ಜೋತೆಯಲ್ಲಿ

15 Oct 2017, 09:07 pm
Download App from Playstore: