ಬಣ್ಣದ ಲೇಖನಿ

ಚೆಂದದ ಲೇಖನಿ ಕೈಯಲ್ಲಿದ್ದರೂ
ನೋವಿನ ಗುರುತುಗಳು ಮನಸ್ಸಲಿತ್ತು.
ಉಡುಗೊರೆಯಾಗಿ ನೀ ಕೊಟ್ಟ ಪುಸ್ತಕ
ನನ್ನತ್ತಲೇ ಕೈಬೀಸಿ ಕರೆದಿತ್ತು!

ಒಲ್ಲದ ಮನಸಿನಿಂದ ಬರೆದ ಸಾಲುಗಳು
ಕಣ್ಣೀರಿನಲಿ ಕರಗಿ ಹೋಗಿರಲು
ನನ್ನ ಕನಸುಗಳೆಲ್ಲ ಚೂರಾದ ಹಾಗೆ
ಉಂಡೆಯಾಗಿ ಕಸದ ಮೂಲೆ ಸೇರಿದ್ದವು!

ಮತ್ತದೇ ಲೇಖನಿಯ ಹಿಡಿದು
ಹೊಸದಾದ ಹಾಳೆಯಲ್ಲಿ ಗೀಚಿದ್ದೆ
ಹೃದಯದ ಭಾವನೆಗಳ ಸೇರಿಸಿ
ಮುದ್ದಾದ ಕವನವ ರಚಿಸಿದ್ದೆ!

ಬಣ್ಣಬಣ್ಣದ ಲೇಖನಿ ನನ್ನಲಿದ್ದರೂ
ಬದುಕಿನ ಬಣ್ಣ ಮಾಸಿಹೋಗಿತ್ತು.
ಪ್ರೀತಿಸುವ ಮನಸುಗಳು ದೂರಾಗಿದ್ದರೂ
ದಪ್ಪ ಪುಸ್ತಕದ ಮತ್ತಷ್ಟು ಪುಟಗಳು
ನನಗಾಗಿ ಕಾಯುತಲಿತ್ತು!

ಪ್ರಿಯಾಂಕ✍

- ಪ್ರಿಯಾಂಕ

16 Oct 2017, 01:26 pm
Download App from Playstore: