ಮಧ್ಯಮ ವರ್ಗ !
ಬೆಳಗ್ಗೆ ಎದ್ದು ಅಂಗಳ ಗುಡಿಸಿ
ಗಂಡನ ಪ್ಯಾಂಟ್ ಜೇಬ್ ಎಲ್ಲ ಹುಡ್ಕಿ
ಮೆಂತೆ ಡಬ್ಬ ಎಲ್ಲಾ ತಡ್ಕಿ
ಹಾಲಿನ ಪಾಕೆಟ್, ಕೊತ್ತಂಬರಿ ಸೊಪ್ಪು
ಕೊಬ್ಬರಿ ಎಣ್ಣೆ, ಟಾಟಾ ಉಪ್ಪು,
ರೆಡ್ ರೋಸ್ ಟಿಪುಡಿ, ಕಾಲ್ ಕೆಜಿ ಸಕ್ರೆ,
ಅರ್ಧ ಗಂಟೆ ಅದು ಇದು ಮಾತು,
ಎದುರು ಮನೆಯೋಳು ಅಲ್ಲೇ ಸಿಕ್ರೆ.
ಕರಿಬೇವು ಇಲ್ಲ, ಪುಳಿವೋಗರೆ ಗೊಜ್ಜು
ಗಡಿಬಿಡಿಯಲ್ಲಿ ಕೆಲಸಕೆ ಸಜ್ಜು.
ಕೇಳೋರಿಲ್ಲ ಕರೆಂಟು ಬಿಲ್ಲು
ರೇಷನ್ ಅಂಗ್ಡಿಲಿ ಸಾಲಾಗಿ ನಿಲ್ಲು.
ಚೀಟಿ ದುಡ್ಡು ಹೊಂದಿಸಿ ಕಟ್ಟು
ಚಪ್ಪಲಿ ತಗೋಬೇಕು ಎರಡ್ ದಿನ ಬಿಟ್ಟು.
ಮಕ್ಕಳ ಸ್ಕೂಲ್ ಫೀಸ್ ಕಟ್ಲೇಬೇಕು
ಇದ್ದುದರಲ್ಲೇ ಜೀವನ ನೂಕು.
ಅನ್ನ ಸಾರು, ಒಣ ಮಿನ್ ದಿವಸ
ಹಬ್ಬ ಬಂದ್ರೆ ಮಾಡು ಪಾಯ್ಸ.
- ಶ್ರೀಗೋ.
17 Oct 2017, 12:43 pm
Download App from Playstore: