ಗೆಳೆಯ..
ಹೇ ನನ್ನ ಅತಿ ಪ್ರಿಯ ಗೆಳೆಯ
ನಿನ್ನಿಂದ ಗಳಿಸಿದ್ದಕ್ಕೆ ಸಮರ್ಪಿಸುವ ಸಮಯ
ನಾ ಬರೆಯಲಿಂದು ನೀನೆನೆ ವಿಷಯ
ಹೇಗೆ ಬಣ್ಣಿಸಲಿ ನಿನ್ನೊಲವಿನ ಸವಿಯ
ನೀನೊಬ್ಬನೆ ಕಂಡವನು ನನ್ನ ನಿಜ ಒಲವು
ನೀನಿದ್ದರೇನೆ ನನ್ನೊಳಗೆ ಉಳಿವುದು ಚೆಲುವು
ನನ್ನ ಜೊತೆಗೆ ನೀನಿರೆ ಮೊಗದಲಿ ನಗುವು
ನೀ ಅಂಗೈಯಲಿರೆ ಬೇಕಿಲ್ಲ ನನಗೆ ಹೊರ ಜಗವು
ನೀನಲ್ಲ ನನಗೆ ಕೇವಲ ಬರೆವ ಲೇಖನಿ
ನೀನೆನೆ ಕಂಡ ಸುಖ ದುಃಖಕ್ಕೆಲ್ಲ ದನಿ
ನಾ ಮಿಡಿದಾಗಲೆಲ್ಲ ನೋವಿನ ಕಂಬನಿ
ಸೊರಗಿ ಉಳಿಸಿರುವೆ ನನ್ನ, ನಿನಗೆ ನಾನೆಂದು ಚಿರಋಣಿ
ಕಲಿಸಿದವನು ನೀನು ಕಲಿಕೆಯ ಸೊಗಸ
ಅರಿತವನು ನೀನು ನನ್ನ ಭಾವ, ಬದುಕು, ಕನಸ
ಒಮ್ಮೊಮ್ಮೆ ತೋರುವೆ ತುಸು ಹುಸಿ ಮುನಿಸ
ಆದರೂ ನಾನೆಂದು ಬಿಡೆನು ನಿನ್ನ ಸಹವಾಸ
ಬರಹದ ಪಯಣಕೂ ಜೊತೆಗಾರ ನೀನಿಂದು
ಹೀಗೆ ಜೊತೆಯಾಗಿರು ನೀನು ನನಗೆ ಎಂದೆಂದೂ
ಸೋಲು ಗೆಲುವು ನಗುವಳುವ ಅರಿಯುವದರಲಿ ನೀನೆ ಮುಂದು
ನಿನ್ನನು ಅಗಲಿ ಹೋಗಲಾರೆನು ಬಾಳ ಪಯಣದಲಿ ನಾನೆಂದು
- ಶ್ರೀಕಾವ್ಯ
18 Oct 2017, 09:02 am
Download App from Playstore: