..

ಪ್ರಶ್ನಿಸುವ ಹುಚ್ಚೇಕೆ ಮನಸೇ ?

ಪ್ರಶ್ನೆ ಕೇಳಿದ ಪ್ರತಿಬಾರಿಯೂ
ನನಗೆ ಉತ್ತರದ ಚಿಂತೆ
ಜೀವನವೇ ಪ್ರಶ್ನೆಯಾದರೆ
ಉತ್ತರ ಹುಡುಕಲೆಗೇ ಎನ್ನುವ ಭೀತಿ

ಕಂಡ ಕಂಡದೆಲ್ಲವು
ಪ್ರಶ್ನಿಸುವ ಚಟವು ಈ ಮನಕೆ
ತನಗೆ ಸಂಬಂಧವೇ ಇರದಿದ್ದರೂ
ಉತ್ತರ ಹುಡುಕಲು ಬಲವಂತವ ಮಾಡುವುದೇಕೆ

ಹರಿವ ನದಿಯ ಕಂಡು
ನಿನ್ನ ಮೂಲ ಏನೆಂದು ಕೇಳಿದರೆ
ಉತ್ತರಿಸಬಲ್ಲದೇ ಆ ನದಿ?
ಅದೇಕೆ ತಿಳಿಯುತ್ತಿಲ್ಲ ನನ್ನ ಮನಕೆ


ಅವಳ ಕಂಡಾಗಲು ಹೇಳಿದ್ದೆ
ಪ್ರಶ್ನಿಸದಿರು ನನ್ನ ಏನೊಂದು
ಆದರೆ ಬಿಡದೆ ಪ್ರಶ್ನಿಸಲು
ಶರಣಾಯಿತು ಹೃದಯ ಮರುಮಾತಾಡದೆ

ಪ್ರಶ್ನೆಯ ಹುಚ್ಚು ಅಷ್ಟಿಷ್ಟಲ್ಲ
ಕೆಲವೊಮ್ಮೆ ಕೇಳುವುದು ನನ್ನನ್ನೇ
ನಿನ್ನ ಹುಟ್ಟಿನ ಉದ್ದೇಶವೇನು ?
ನಿನ್ನೆಲ್ಲ ಪ್ರಶ್ನೆಗೆ ಉತ್ತರ ಹುಡುಕುವುದೇ?

ಅತಿರೇಕದ ನಡುವಳಿಕೆ
ಪ್ರಶ್ನಿಸುವ ಹುಚ್ಚು ಈ ಮನಕೆ
ಅದರ ಕೆಲವೊಂದು ಪ್ರಶ್ನೆಗೆ ಉತ್ತರ
ತಿಳಿಯುತ್ತಿಲ್ಲ,ಆದರೂ ನನ್ನ ಬಿಡುತ್ತಿಲ್ಲ


ಕತ್ತಲ ಕೋಣೆಯಲಿ ಕಣ್ಣೀರ
ಜೊತೆಗೂಡಿ ಬೇಡಿಕೊಂಡೆ
ಮತ್ತೆಂದೂ ಕೆಳದಿರು ಪ್ರಶ್ನೆಯನ್ನು
ಉತ್ತರ ಹೇಳಲಿಲ್ಲ,ಪ್ರಶ್ನೆ ನಿಲ್ಲಲಿಲ್ಲ

ಇನ್ನೆಷ್ಟು ಕಾಡುವೆ ನನ್ನ ಪ್ರಶ್ನೆಗಳಿಂದ
ಉತ್ತರಿಸಲು ನಾನೇನು ಮೇಧಾವಿ ಅಲ್ಲ
ಬಿಟ್ಟುಬಿಡು ನನ್ನನ್ನು ಶಾಶ್ವತವಾಗಿ
ಪ್ರಶ್ನೆಯ ಸುಳಿಯಲ್ಲೇ ಮುಳುಗಿಹೋದೇನೂ..

ಉತ್ತರವ ಬೆನ್ನಟ್ಟಿ ಹೋದ
ಪ್ರತಿಬಾರಿಯೂ ಪ್ರಶ್ನೆಗಳ ಸಾಲು
ಕೆಲವು ನನ್ನ ಕೆಣುಕುವವು
ಕೆಲವು ನನ್ನ ಸೋಲಿಸಿ ಸಾಯಿಸುವವು

ಒಂಟಿಗನ ಪ್ರಶ್ನೆಗಳಿಗೆ
ಉತ್ತರ ಹುಡುಕುವರಾರು
ನಿನ್ನ ಬಿಡನೆಂದರೆ ಬಿಡೆನು
ಉತ್ತರ ಹುಡುಕುವುದೇ ಮೋಕ್ಷವು ನಿನಗೆ

ಕೊನೆಗೆ ಅರಿವಾದ ಸತ್ಯ
ಪ್ರಶ್ನೆಗಳು ಬೇಕು ಮನುಜನಿಗೆ
ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಲು
ತಪ್ಪುಗಳ ತಿದ್ದಿ ಬದುಕು ರೂಪಿಸಿಕೊಳ್ಳಲು
ಗಾದೆಪ್ಪ

- ಗಾದೆಪ್ಪ

20 Oct 2017, 07:21 pm
Download App from Playstore: