ಗೆಲುವಿನ ಪ್ರೀತಿ
ಸಮುದ್ರ ತೀರದಲಿ ಕುತ್ತೊಂಡು
ಬಂಡೆನ ಹಾಸಿಗೆ ಮಾಡ್ಕೊಂಡು
ಚುಕ್ಕಿ ಚಂದ್ರಮನ ನೋಡ್ಕೊಂಡು
ಕವನ ಗೀಚುತ್ತಿದ್ದೆ ನಿನ್ನ ನೆನೆಸ್ಕೊಂಡು...
ಕೆಲಸವಿಲ್ಲದೆ ಅಲಿತಿದ್ದೆ ಒಂದಿನ
ಯಾಕೋ ಬೇಜಾರಾಗಿತ್ತು ನನ್ನ ಮನ
ಅಷ್ಟೊತ್ತಿಗೆ ನಿನ್ನನ ಕಂಡೆ ನಾನ ಆದಿನ
ಅದೇ ಕೆಲಸವಾಯಿತು ಕಡೆಗೊಂದಿನ.....
ಕನ್ಸೂ ಮನ್ಸಲ್ಲೂ ನಿನ್ನನೆ ತುಂಬ್ಕೊಂಡಿದ್ದೆ
ನಿಂಜೊತೆ ಮಾತಾಡುಕೆ ಕಾಯ್ತಾಯಿದ್ದೆ
ನನ್ನ ಹೃದಯ ನಿನ್ನನ ನೋಡ್ದೆ ಇರಕಾಗ್ತಿಲ
ನೀ ಮಾತ್ರ ನನ್ನ ನೋಡ್ಲೇ ಇಲ್ಲ......
ಕಡಿಗೊಂದಿನ ಹರಕೆ ಹೊತ್ಕೊಂಡಬಿಟ್ಟೆ
ದೇವರು ತಥಾಸ್ತು ಅಂದೇಬಿಟ್ಟ
ಒಂದಿನ ನನ್ನ ನೋಡಿ ನಕ್ಕಬಿಟ್ಟಿದ್ದೆ
ನಾನಂತೂ ಖುಷಿಗೆ ಕುಣಿದಕುಪ್ಪಳಿಸಿದ್ದೆ..
ಅಂದಿನಿಂದ ಶುರುವಾಯ್ತ ನಮ್ಮ ಪ್ರೀತಿ
ನಮಗಿರಲಿಲ್ಲ ಯಾರದೂ ಭೀತಿ
ನೀನೆ ನಮ್ಮನೆ ಸೊಸಿ ಅಂದ್ಲು ನನ್ನಮ್ಮ
ಅದೇ ಖುಷಿಗೆ ಕವನ ಗೀಚಿಬಿಟ್ಟೆ ನಾನೊಮ್ಮೆ....
ಪ್ರಿಯಾಂಕ✍
- ಪ್ರಿಯಾಂಕ
23 Oct 2017, 09:16 pm
Download App from Playstore: