ಕನಸು
ನಾ ಕನಸೊಂದು ಕಾಣುವಾಗ
ನಿನ್ನ ನೆನಪೊಂದು ಕಾಡಿತು ಆಗ
ನಾ ಗುರಿಯ ಹಿಂದೆ ಹೊರಟಾಗ
ನಿನ್ನ ನೆರಳು ಕಾಡಿತು ನನ್ನ ಆವರಿಸಿದಾಗ
ನಾ ಮಂಡಿಯೂರಿ ಬೇಡಿದೆ, ನೀ ನನ್ನ ಬಿಡು ಎಂದು
ಆದರೂ ಬಿಡಲಿಲ್ಲ ನೀ ನನ್ನ ಬೆನ್ನ ಹಿಂದೆ ಬಿದ್ದು
ನಾ ನನ್ನ ಹಾಡಿನಲಿ ಮೈ ಮರೆತೆ
ಆ ಹಾಡಿನಲಿ ನೀ ಕವಿತೆಯಾಗಿ ಬೆರೆತೆ
ನೀ ಅದರಲಿ ಕಲ್ಪನೆಯಾಗಿ ಕಲೆತೆ
ಆದರೂ ಅರ್ಥವಾಗಿಲ್ಲ ಇಷ್ಟಲ್ಲಾ ಯಾಕೆ ಈ ನಾಟಕೀಯತೆ.
ತಿಳಿಯಲಾರೆಯಾ ನೀ ನನ್ನ ವೇದನೆ
ಕೊನೆಯದಾಗಿ ನಿನ್ನಲ್ಲಿ ನನ್ನ ನಿವೇದನೆ
ನೀ ಎಂದು ಬಿಟ್ಟು ಹೋಗದಿರು ನನ್ನಾಣೆ.
- ಉಮೇಶ್.
- Umesh
23 Oct 2017, 11:49 pm
Download App from Playstore: