*ತಾಜಾ ಪ್ರೀತಿ

ನನಗೂ ಆಯಿತು ಪ್ರೀತಿ
ಸೊಪ್ಪು ಮಾರುವ ಹುಡುಗಿಯೊಂದಿಗೆ

ಎಚ್ಚರವಾಗದು ಮುಂಜಾನೆ ಅಲಾರಾಂ ಸದ್ದಿನೊಂದಿಗೆ...
ಪಕ್ಕನೆ ಎಚ್ಚರವಾಗುವುದು
ಸೊಪ್ಪು ಎಂದು ಆಕೆ ಕೂಗುವ ಇನಿದನಿಗೆ...


ಕೇಳಿದೆ ನಾ ಆಕೆಗೆ ನಮ್ಮ ಪ್ರೀತಿ ಅಮರವೇ ಹುಡುಗಿ...
ಉಲಿದಳು ಆಕೆ ಭಯ ಬೇಡ ಗೆಳೆಯ
ಪ್ರೀತಿ ಬಾಡದಂತೆ ನಾ ಹಾಕುವೆ ನೀರನ್ನು ಸದಾ
ಇರುವುದು ಸೊಪ್ಪಿನಂತೆ ಸೊಂಪಾಗಿ ಸದಾ ತಾಜಾ..

- sailent

24 Oct 2017, 09:59 am
Download App from Playstore: